ಸೋಮವಾರ ದೇಶಾದ್ಯಂತ ವೈದ್ಯರ ಮುಷ್ಕರ: ಸರ್ಕಾರದಿಂದ ಮಹತ್ವದ ಸೂಚನೆ

Jun 15, 2019, 8:00 PM IST

ಬೆಂಗಳೂರು (ಜೂ.15): ವೈದ್ಯರ ಸುರಕ್ಷತೆ ಮತ್ತು ಇತರ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಳೆದ ಐದು ದಿನಗಳಿಂದ ಪಶ್ಚಿಮ ಬಂಗಾಳದಲ್ಲಿ ವೈದ್ಯರು ಮುಷ್ಕರ ನಡೆಸುತ್ತಿದ್ದಾರೆ. ಸೋಮವಾರ ಅಖಿಲ ಭಾರತ ಮುಷ್ಕರಕ್ಕೆ ಭಾರತೀಯ ವೈದ್ಯಕೀಯ ಮಂಡಳಿಯು (IMA) ಕರೆ ನೀಡಿದೆ. 

ಆದರೆ, ಸಾರ್ವಜನಿಕರ ಹಿತದೃಷ್ಟಿಯನ್ನು ಮುಂದಿಟ್ಟುಕೊಂಡು ಮುಷ್ಕರ ನಡೆಸದಂತೆ  ರಾಜ್ಯ ಸರ್ಕಾರವು ವೈದ್ಯರಿಗೆ ಮನವಿ ಮಾಡಿಕೊಂಡಿದೆ. ಆದರೆ ರಾಜ್ಯ ವೈದ್ಯರ ಸಂಘದಿಂದ ಈವರೆಗೆ ಯಾವುದೇ ತೀರ್ಮಾನ ಅಥವಾ ನಿಲುವನ್ನು ಪ್ರಕಟಿಸಲಾಗಿಲ್ಲ. 

ಇನ್ನೊಂದು ಕಡೆ, ಮುಷ್ಕರ ನಿರತ ವೈದ್ಯರ ಬೇಡಿಕೆ ಈಡೇರಿಸಲು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮುಂದಾಗಿದ್ದಾರೆ. ಬಂಗಾಳದಲ್ಲಿ ರೋಗಿಯೊಬ್ಬರ ಸಾವಿನ ಬಳಿಕ ವೈದ್ಯರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು,  ಸರ್ಕಾರಿ ಕಿರಿಯ ವೈದ್ಯರು ಮುಷ್ಕರ ನಡೆಸುತ್ತಿದ್ದಾರೆ.