ಈ ಬಾಲಿವುಡ್‌ನ ಟಾಪ್ ನಟಿ ಮೊದಲು ಪ್ರಿಸ್ಕೂಲ್ ಟೀಚರ್ ಆಗಿ ಮಕ್ಕಳ ಡೈಪರ್ ಬದಲಿಸುತ್ತಿದ್ರಂತೆ!

First Published | Apr 30, 2024, 5:31 PM IST

ಈಕೆ ಬಾಲಿವುಡ್‌ನ ಟಾಪ್ ನಟಿಯರಲ್ಲೊಬ್ಬರು. ಸಧ್ಯದಲ್ಲೇ ಯಶ್ ಜೊತೆ ಸ್ಯಾಂಡಲ್‌ವುಡ್‌ಗೂ ಕಾಲಿಡ್ತಿದಾರೆ. ಈಕೆ ಮೊದಲು ಪ್ರಿಸ್ಕೂಲ್ ಶಿಕ್ಷಕಿಯಾಗಿದ್ರು ಎಂದ್ರೆ ನಂಬೋದು ಕಷ್ಟ, ಆದ್ರೂ ನಿಜ..
 

ಸಾಮಾನ್ಯವಾಗಿ, ಮನರಂಜನಾ ಉದ್ಯಮದಲ್ಲಿ ಖ್ಯಾತಿಯನ್ನು ಪಡೆಯುವ ಮೊದಲು, ಅನೇಕ ನಟರು ಸಂಪೂರ್ಣವಾಗಿ ವ್ಯತಿರಿಕ್ತ ಕೆಲಸಗಳನ್ನು ಮಾಡಿರುತ್ತಾರೆ.  ಅದೇ ರೀತಿ ಈ ನಟಿ ಕೂಡಾ ಪ್ರಿಸ್ಕೂಲ್ ಟೀಚರ್ ಆಗಿದ್ದರಂತೆ.

ನಾವು ಹೇಳ್ತಿರೋದು ಟಾಪ್ ಬಾಲಿವುಡ್ ನಟಿ ಕಿಯಾರಾ ಅದ್ವಾನಿ ಬಗ್ಗೆ ಎಂದರೆ ನಿಮಗೆ ನಂಬಲು ಕೊಂಚ ಕಷ್ಟವಾಗಬಹುದು. ಆದರೆ, ಆಕೆಯೇ ಈ ವಿಷಯ ಹೇಳಿದ್ದಾರೆ. 

Tap to resize

ಅನೇಕ ಹಿಟ್‌ಗಳು ಹಾಗೂ ಬ್ಲಾಕ್‌ಬಸ್ಟರ್ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಕಿಯಾರಾ, ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾರನ್ನು ವಿವಾಹವಾಗಿದ್ದಾರೆ. 

ಅವರ ಸೌಂದರ್ಯ ಮತ್ತು ನಟನಾ ಪ್ರತಿಭೆಯಿಂದ ಪ್ರೇಕ್ಷಕರ ಹೃದಯಗಳನ್ನು ಗೆದ್ದಿರುವ ನಟಿ ತಾವು ಪ್ರಿಸ್ಕೂಲ್ ಶಿಕ್ಷಕಿಯಾಗಿದ್ದು ಅವರ ಅಮ್ಮನದೇ ಶಾಲೆಯಲ್ಲಿ. 

ತಾಯಿ ನಡೆಸುವ ಪ್ರಿಸ್ಕೂಲ್‌ಗೆ ಬೆಳಿಗ್ಗೆ 7 ಗಂಟೆಗೆ ಹೋಗುತ್ತಿದ್ದೆ ಮತ್ತು ಮಕ್ಕಳನ್ನು ನೋಡಿಕೊಳ್ಳಲು ಅಲ್ಲಿಯೇ ಇರುತ್ತಿದ್ದೆ. ಮಕ್ಕಳ ನಿರ್ವಹಣೆ ವಿಷಯದಲ್ಲಿ ಎಲ್ಲವನ್ನೂ ಮಾಡಿದ್ದೇನೆ ಎಂದಿದ್ದಾರೆ. 

ನಾನು ಶಿಶುಗೀತೆಗಳನ್ನು ಹಾಡಿದೆ. ನಾನು ಅವರಿಗೆ ಅಕ್ಷರಗಳು ಮತ್ತು ಸಂಖ್ಯೆಗಳನ್ನು ಕಲಿಸಿದೆ. ನಾನು ಅವರ ಡೈಪರ್‌ಗಳನ್ನೂ ಬದಲಾಯಿಸಿದೆ ಎಂದು ನಟಿ ಹೇಳಿದ್ದಾರೆ. 

ಗುಡ್ ನ್ಯೂಜ್ ಮತ್ತು ಕಬೀರ್ ಸಿಂಗ್‌ನಲ್ಲಿ ಗರ್ಭಿಣಿ ಮಹಿಳೆಯ ಪಾತ್ರವನ್ನು ಮಾಡುವಾಗ ಈ ಅನುಭವ ಅವರಿಗೆ ಸಾಕಷ್ಟು ಸಹಾಯ ಮಾಡಿತಂತೆ. 

ಈಗ, ಕಿಯಾರಾ ಅಡ್ವಾಣಿ ಭಾರತದಲ್ಲಿ ಹೆಚ್ಚು ಬೇಡಿಕೆಯಿರುವ ನಟಿಯರಲ್ಲಿ ಒಬ್ಬರು. ಸುಶಾಂತ್ ಸಿಂಗ್ ರಜಪೂತ್ ನಟಿಸಿದ ಎಂಎಸ್ ಧೋನಿ: ದಿ ಅನ್‌ಟೋಲ್ಡ್ ಸ್ಟೋರಿ ಎಂಬ ಬಯೋಪಿಕ್‌ನಲ್ಲಿ ಸಾಕ್ಷಿ ಧೋನಿ ಪಾತ್ರದೊಂದಿಗೆ ಆಕೆ ಜನಮನ ಗೆದ್ದರು.

 ಚಲನಚಿತ್ರವು ವಾಣಿಜ್ಯಿಕವಾಗಿ ಯಶಸ್ವಿಯಾಯಿತು ಮತ್ತು ವಿಶ್ವಾದ್ಯಂತ 215.50 ಕೋಟಿ ರೂ. ಮಾಡಿತು.  ಇದರ ನಂತರ, ಶಾಹಿದ್ ಕಪೂರ್ ಎದುರು ಕಬೀರ್ ಸಿಂಗ್ಗಾಗಿ ಕಿಯಾರಾರನ್ನು ಆಯ್ಕೆ ಮಾಡಲಾಯಿತು.

ಅವರು ಗುಡ್ ನ್ಯೂಜ್‌ನಲ್ಲಿ ದಿಲ್ಜಿತ್ ದೋಸಾಂಜ್, ಅಕ್ಷಯ್ ಕುಮಾರ್ ಮತ್ತು ಕರೀನಾ ಕಪೂರ್ ಖಾನ್ ಅವರೊಂದಿಗೆ ಪರದೆಯನ್ನು ಹಂಚಿಕೊಂಡರು. ಸಧ್ಯ ಯಶ್ ಮುಂದಿನ ಚಿತ್ರ ಟಾಕ್ಸಿಕ್‌ಗೆ ನಟಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. 

Latest Videos

click me!