ಪ್ರಪಂಚವೇ ಚಾಣಕ್ಯರನ್ನು (Chanakya) ಪ್ರಾಚೀನ ಕಾಲದ ದಾರ್ಶನಿಕ, ಚಿಂತಕ, ಶಿಕ್ಷಕ ಎನ್ನುತ್ತಾರೆ. ಚಾಣಕ್ಯ ತನ್ನ ನೀತಿಗಳ ಮೂಲಕವೇ ಅಂದಿಗೂ ಇಂದಿಗೂ ಜನಪ್ರಿಯತೆ ಪಡೆದಿದ್ದಾರೆ. ಅವರು ಪ್ರತಿಯೊಂದು ನೀತಿಗಳು ಇಂದಿಗೂ ಪ್ರಸ್ತುತ. ಮದುವೆ ಬಗ್ಗೆ ಕೂಡ ಚಾಣಕ್ಯ ತನ್ನ ನೀತಿಯಲ್ಲಿ ತಿಳಿಸಿದ್ದಾರೆ. ಇದರಲ್ಲಿ ಮದುವೆಗೂ ಮುನ್ನ ಸಂಗಾತಿಯನ್ನು ಯಾವ ರೀತಿ ಪರೀಕ್ಷಿಸಬೇಕು ಅನ್ನೊದನ್ನು ತಿಳಿಸಿದ್ದಾರೆ.
ಪರೀಕ್ಷಿಸಬೇಕಾದ ವಿಷಯಗಳು
ನೀವು ಅರೇಂಜ್ ಮ್ಯಾರೇಜ್ (arranged marriage) ಆಗುತ್ತಿರಲಿ ಅಥವಾ ಪ್ರೀತಿಸಿ ಮದುವೆ ಆಗೋದು ಇರಲಿ, ಏನೇ ಆದರೂ ಮೊದಲು ನಿಮ್ಮ ಜೀವನ ಸಂಗಾತಿಯಾಗುವವರನ್ನು ಪರೀಕ್ಷಿಸಬೇಕು ಎಂದು ಚಾಣಕ್ಯ ಹೇಳಿದ್ದಾರೆ.
ಧರ್ಮ :
ನೀವು ಮದುವೆಯಾಗಲು ಸೂಕ್ತವಾದ ಸಂಗಾತಿಯನ್ನು (life partner) ಹುಡುಕುತ್ತಿದ್ದರೆ ಮೊದಲಿಗೆ ಅವರು ಧರ್ಮ, ಕರ್ಮದ ಬಗ್ಗೆ ನಂಬಿಕೆ ಹೊಂದಿದ್ದಾರೆಯೇ ಅನ್ನೋದನ್ನು ತಿಳಿದುಕೊಳ್ಳೋದು ಮುಖ್ಯ. ಯಾಕಂದ್ರೆ ಒಬ್ಬ ಧಾರ್ಮಿಕ ಮನುಷ್ಯ ಯಾವತ್ತೂ ತನ್ನ ಮರ್ಯಾದೆ ಹೋಗುವಂತಹ ಕೆಲಸ ಮಾಡೋದಿಲ್ಲ.
ಸಂಯಮ :
ಮದುವೆಯಾಗಲು ಹುಡುಗ ಅಥವಾ ಹುಡುಗಿ ನೋಡಲು ಹೋಗುವಾಗ, ಅವರು ಎಷ್ಟು ಸಂಯಮ ಶೀಲರು ಅಥವಾ ಎಷ್ಟು ಧೈರ್ಯವಂತರು ಅನ್ನೋದನ್ನು ತಿಳಿದುಕೊಳ್ಳೋದು ಮುಖ್ಯ. ಕಷ್ಟದ ಸಮಯದಲ್ಲಿ ಅವರು ಹೇಗೆ ವರ್ತಿಸುತ್ತಾರೆ ಮತ್ತು ಸಮಸ್ಯೆಯನ್ನು ಹೇಗೆ ಎದುರಿಸುತ್ತಾರೆ ಅನ್ನೋದು ದಾಂಪತ್ಯ ಜೀವನಕ್ಕೆ ಅತ್ಯಗತ್ಯ.
ಕೋಪ
ಆಚಾರ್ಯ ಚಾಣಕ್ಯರ ಅನುಸಾರ ಕೋಪ ಮನುಷ್ಯನ ದೊಡ್ಡ ಶತ್ರು (anger is biggest enemy). ಹಾಗಾಗಿ ನೀವು ಮದುವೆಯಾಗಲಿರುವ ವ್ಯಕ್ತಿಗೆ ಕೋಪ ಎಷ್ಟಿದೆ? ಯಾವ ಸಂದರ್ಭದಲ್ಲಿ ಕೋಪ ಬರುತ್ತದೆ ಮತ್ತು ಅವರು ಹೇಗೆ ಕೋಪವನ್ನು ನಿಯಂತ್ರಿಸುತ್ತಾರೆ ಅನ್ನೋದನ್ನು ತಿಳಿಯಬೇಕು.
ಸಿಹಿ ಮಾತು
ಚಾಣಕ್ಯ ನೀತಿಯ ಪ್ರಕಾರ ನೀವು ಮದುವೆಗೆ ಸಂಗಾತಿ ನೋಡಲು ಹೊರಟಾಗ, ಆ ವ್ಯಕ್ತಿ ಯಾವ ರೀತಿ ಮಾತನಾಡುತ್ತಾರೆ ಅನ್ನೋದನ್ನು ತಿಳಿದುಕೊಳ್ಳೋದು ಮುಖ್ಯ, ಯಾಕಂದ್ರೆ ಬಾಣದಿಂದ ಹೊರಟ ಬಾಣ ಮತ್ತು ಬಾಯಿಂದ ಹೊರಟ ಮಾತನ್ನು ಹಿಂತೆಗೆದುಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಯೋಚಿಸಿ ಮಾತನಾಡುವ ವ್ಯಕ್ತಿಯನ್ನು ಆಯ್ಕೆ ಮಾಡಿ.
ಸಂಸ್ಕಾರ
ಪ್ರತಿಯೊಬ್ಬ ವ್ಯಕ್ತಿಯೂ ಸಂಸ್ಕಾರ ಹೊಂದಿರುವ ಸಂಗಾತಿಯನ್ನು ಮದುವೆಯಾಗಲು ಬಯಸುತ್ತಾರೆ. ಹಾಗಾಗಿ ಮದುವೆಯಾಗಲು ಹೊರಟಿದ್ದರೆ, ವ್ಯಕ್ತಿಯ ಅಂದಕ್ಕಿಂತ ಹೆಚ್ಚಾಗಿ, ಅವರ ಗುಣಗಳಿಗೆ ಆದ್ಯತೆ ನೀಡಿ.