ಆದಿಲ್​ ಖಾನ್​ನಿಂದ ರಾಖಿಗೆ ಬಂಧನದ ಭೀತಿ: ಬುರ್ಖಾದಲ್ಲಿ ಮೊದಲ ಗಂಡ ರಿತೇಶ್​ನ ಆಶ್ರಯ ಪಡೆದ ನಟಿ ಹೇಳಿದ್ದೇನು?

By Suvarna News  |  First Published Apr 30, 2024, 5:41 PM IST

ಎರಡನೆಯ ಪತಿ ಆದಿಲ್​ ಖಾನ್​ ವಿರುದ್ಧದ ಪ್ರಕರಣದಲ್ಲಿ ಜೈಲು ಭೀತಿ ಎದುರಿಸುತ್ತಿರುವ ರಾಖಿ ಸಾವಂತ್​ಗೆ ಹಳೆಯ ಗಂಡನ ಪಾದವೇ ಗತಿಯಾಗಿದೆ. ಏನಿದು ಕೇಸ್​?
 


ಮಾಜಿ ಪತಿ ಆದಿಲ್​ ಖಾನ್​ರ ಖಾಸಗಿ ವಿಡಿಯೋ ಲೀಕ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್​ನಿಂದ ಬಂಧನದ ಭೀತಿ ಎದುರಿಸುತ್ತಿರುವ ಬಾಲಿವುಡ್​ ಕಾಂಟ್ರವರ್ಸಿ ಕ್ವೀನ್​, ಡ್ರಾಮಾ ಕ್ವೀನ್​ ರಾಖಿ ಸಾವಂತ್​ ದಿಢೀರನೆ ಎಲ್ಲರ ಕಣ್ಣು ತಪ್ಪಿಸಿ ಬುರ್ಖಾದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ತನ್ನದೇನೂ ತಪ್ಪಿಲ್ಲ ಎಂದುಕೊಂಡು  ಅರೆಬರೆ ಡ್ರೆಸ್​ ಹಾಕಿಕೊಂಡು ಪ್ರೆಸ್​ಮೀಟ್​ ಮಾಡಿದ್ದ ರಾಖಿ ಸಾವಂತ್​ ಏಕಾಏಕಿಯಾಗಿ ಬುರ್ಖಾದಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ವಿರುದ್ಧ ಆದಿಲ್​ ಖಾನ್​ ದೂರು ದಾಖಲು ಮಾಡುತ್ತಿದ್ದಂತೆಯೇ ತಮ್ಮನ್ನು ಬಂಧಿಸುವ ಸಾಧ್ಯತೆ ಇದೆ ಎಂದುಕೊಂಡಿದ್ದ ರಾಖಿ, ತಮ್ಮನ್ನು ಬಂಧಿಸದಂತೆ ಕೋರಿ ನಿರೀಕ್ಷಣಾ ಜಾಮೀನು ಕೋರಿದ್ದರು. ಆದರೆ ಇವರ ಅರ್ಜಿ ತಿರಸ್ಕರಿಸಿರುವ ಸುಪ್ರೀಂಕೋರ್ಟ್​ ನಾಲ್ಕು ವಾರಗಳಲ್ಲಿ ಸರೆಂಡರ್​ ಆಗುವಂತೆ ಆದೇಶಿಸಿದೆ. ಇದರ ಬೆನ್ನಲ್ಲೇ ನಟಿ ಬುರ್ಖಾದಲ್ಲಿ ಕಾಣಿಸಿಕೊಂಡಿದ್ದಾರೆ.

ಇದಾದ ಬಳಿಕ ಕೆಲವೇ ಹೊತ್ತಿನಲ್ಲಿ ತಮ್ಮ ಇನ್ನೋರ್ವ ಮಾಜಿ ಪತಿ ಅಂದರೆ ಮೊದಲ ಪತಿ ರಿತೇಶ್​ ಜೊತೆ ಕಾಣಿಸಿಕೊಂಡಿದ್ದಾರೆ ಈಕೆ.   ಆದಿಲ್ ಮೇಲೆ ಆರೋಪ ಹೊರಿಸಿರುವ ಅವರು,  ಕೋರ್ಟ್ ವಿಷಯದಲ್ಲಿ ಆದಿಲ್ ಸುಳ್ಳು ಹೇಳುತ್ತಿದ್ದಾನೆ. ನಾನು ಜೈಲಿಗೆ ಹೋಗಲಿದ್ದೇನೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾನೆ. ನಾನು ಅದನ್ನು ಕೇಳಿ ಮಜಾ ಮಾಡುತ್ತಿದ್ದೇನೆ ಎಂದಿದ್ದಾರೆ ರಾಖಿ. ಆದಿಲ್​ ದೂರವಾದ ಮೇಲೆ ಹಳೆಯ ಗಂಡನ ಪಾದವೇ ಗತಿ ಎನ್ನುವಂತೆ ರಿತೇಶ್​ ಜೊತೆ ರಾಖಿ ಕಾಣಿಸಿಕೊಂಡಿದ್ದಾರೆ. 

Tap to resize

Latest Videos

ರಾಖಿ ಜೊತೆ ಆದಿಲ್‌ನ ಮದ್ವೆನೇ ಆಗಿರಲಿಲ್ವಾ? ಹಾಗಿದ್ರೆ ಮತಾಂತರ ಆಗಿದ್ಯಾಕೆ? ಇದೇನಿದು ಹೊಸ ಟ್ವಿಸ್ಟ್‌?

ಅದೇ ಇನ್ನೊಂದೆಡೆ ಆದಿಲ್​ ಖಾನ್​,  ಮತ್ತೊಂದು ಮದುವೆ ಆಗಿದ್ದಾರೆ.  ರಾಖಿ ಜೊತೆ ನನ್ನ ಮದುವೆ ಆಗಿರಲಿಲ್ಲ. ಈಗ ಆಗ್ತಿರೋದು ನನ್ನ  ಮೊದಲ ಮದುವೆ ಎಂದು ಹೇಳಿಕೆ ನೀಡಿದ್ದರು.  ರಾಜಸ್ಥಾನದ ಜೈಪುರದಲ್ಲಿ ನಡೆದ ರಹಸ್ಯ ಸಮಾರಂಭದಲ್ಲಿ ಸೋಮಿ ಖಾನ್ ಜೊತೆ ಹಸೆಮಣೆ ತುಳಿದಿದ್ದಾರೆ.  ಆದರೆ ಈ ಮದ್ವೆಯ ಬಗ್ಗೆ ಎಲ್ಲೂ ಸಾರ್ವಜನಿಕವಾಗಿ ಹೇಳಿಕೊಂಡಿರಲಿಲ್ಲ ಆದಿಲ್​.  ಸೋಮಿ ಖಾನ್ ಅವರು ವಿವಾದಾತ್ಮಕ ರಿಯಾಲಿಟಿ ಶೋ ಬಿಗ್‌ಬಾಸ್‌ನಲ್ಲಿ 2018ರಲ್ಲಿ ಕಾಣಿಸಿಕೊಂಡಿದ್ದರು.  ಇದೀಗ ಕೋರ್ಟ್​ ಆದೇಶ ಬರುತ್ತಿದ್ದಂತೆಯೇ ಆದಿಲ್​ ಖಾನ್​ ಸೋಷಿಯಲ್​ ಮೀಡಿಯಾ ಎದುರು ಬಂದು, ನಾನೀಗ ನನ್ನ ಪತ್ನಿ ಜೊತೆ ಖುಷಿಯಾಗಿದ್ದೇನೆ. ಸುಮ್ಮನೇ ಈ ಕಾನೂನು ಸಮರವೆಲ್ಲಾ ಮುಗಿಸೋಣ. ಈ ಗಲಾಟೆಯೆಲ್ಲಾ ಸಾಕು ಎಂದಿದ್ದಾರೆ. 

ಅಷ್ಟಕ್ಕೂ, ರಾಖಿ ಸಾವಂತ್​ ಮತ್ತು ಆದಿಲ್​ ಖಾನ್​ ಜೋಡಿಯ ವಿಷಯ ಕಳೆದೊಂದು ವರ್ಷದಿಂದ ಸಿಕ್ಕಾಪಟ್ಟೆ ಸದ್ದು ಮಾಡುತ್ತಲೇ ಇದೆ. ಒಂದಾದ ಮೇಲೊಂದರಂತೆ ನಾಟಕೀಯ ಬೆಳವಣಿಗೆಗಳು ಈ ಜೋಡಿಯ ನಡುವೆ ನಡೆಯುತ್ತಲೇ ಇದೆ.  ಡ್ರಾಮಾ ಕ್ವೀನ್​ ಎಂದೇ ಫೇಮಸ್​ ಆಗಿರುವ ನಟಿ ರಾಖಿ ಸಾವಂತ್​ (Rakhi Sawant) ಮತ್ತು ಆದಿಲ್​ ಖಾನ್​ ದುರ್ರಾನಿ ಅವರ  ಮದುವೆಯ ಕಥೆ ಸಿನಿಮಾಕ್ಕಿಂತಲೂ ಕುತೂಹಲವಾಗಿದೆ. ಮೈಸೂರಿನ ಯುವಕ ಆದಿಲ್​ ಖಾನ್​ ಮದುವೆಯನ್ನು ನಿರಾಕರಿಸಿದ್ದು, ರಾಖಿ ರಂಪಾಟ ಮಾಡಿದ್ದು, ಕೊನೆಗೂ ಆದಿಲ್​  ಮದುವೆಯನ್ನು ಒಪ್ಪಿಕೊಂಡಿದ್ದು ಎಲ್ಲವೂ ಯಾವ ಸಿನಿಮಾ ಕಥೆಗಿಂತಲೂ ಭಿನ್ನವಾಗಿರಲಿಲ್ಲ. ಎಲ್ಲವೂ ಸುಖಾಂತ್ಯಗೊಂಡಿತು ಎನ್ನುವಾಗಲೇ  ಆದಿಲ್ ತಮಗೆ ಮೋಸ ಮಾಡುತ್ತಿದ್ದಾರೆ, ಹಲ್ಲೆ ಮಾಡಿದ್ದಾರೆ, ಇನ್ನೊಬ್ಬಳ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ,  ಆದಿಲ್‌ಗಾಗಿ   ಇಸ್ಲಾಂಗೆ ಮತಾಂತರ ಮಾಡಿಕೊಂಡಿರುವೆ. ನಾನು ಇಸ್ಲಾಂ ಧರ್ಮವನ್ನು ಒಪ್ಪಿಕೊಂಡು ಆದಿಲ್‌ನ ಮದುವೆ ಆಗಿದ್ದೇನೆ ಎಂದೆಲ್ಲಾ ಆರೋಪಿಸಿದ್ದ ರಾಖಿ ಕೊನೆಗೆ ದೂರು ಕೊಟ್ಟರು. ಇದರಿಂದ ಆದಿಲ್​ (Adil Khan Durrani) ವಿರುದ್ಧ ಎಫ್​ಐಆರ್​ ದಾಖಲಾಗಿದ್ದು  ಅವರು ಜೈಲಿಗೆ ಹೋದದ್ದು, ನಂತರ ಅವರು ಬಿಡುಗಡೆಗೊಂಡ ಬಳಿಕ ಪರಸ್ಪರ ದೋಷಾರೋಪ ಮಾಡುತ್ತಾ ಪತ್ರಿಕಾಗೋಷ್ಠಿ ಮಾಡಿರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ.

ನಾನೊಬ್ಳು ಭಾರತೀಯ ನಾರಿ... ಕ್ಯಾಮೆರಾ ಎಲ್ಲೆಲ್ಲೋ ಝೂಮ್​ ಮಾಡ್ಬೇಡಿ... ರಾಖಿ ಗರಂ

click me!