Apr 5, 2023, 4:05 PM IST
ಭಾರತ್ ಮಾಲಾ ಅಡಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಿಂದ ಕುಮಟಾವರೆಗೆ 60 ಕಿ.ಮೀ. ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸುವ ಕಾಮಗಾರಿ ವರ್ಷಗಳು ಉರುಳುತ್ತಿದ್ದರೂ ಆಮೆಗತಿಯಲ್ಲೇ ಸಾಗುತ್ತಿದೆ. ಪ್ರಯಾಣಿಕರಿಗೆ ಕಂಟಕವಾಗಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ.ಪರಿಸರವಾದಿಗಳು ಮರಗಳನ್ನು ಕಡಿಯದಂತೆ ಕಾರಣವೊಡ್ಡಿ ಹೈಕೋರ್ಟ್ ನಿಂದ ತಡೆಯಾಜ್ಞೆ ತಂದಿದ್ದ ಕಾರಣ ಒಂದು ವರ್ಷ ಅಲ್ಲಿ ವಿಳಂಬವಾಯಿತು. ಎಲ್ಲಾ ಅಡೆತಡೆಗಳನ್ನು ನಿವಾರಿಸಿಕೊಂಡು 2021ರ ಜನವರಿಯಲ್ಲಿ ಕಾಮಗಾರಿ ನಡೆಸಲು ಗುತ್ತಿಗೆ ಕಂಪನಿ ಹದಗೆಟ್ಟಿದ್ದ ರಸ್ತೆಯನ್ನ ಅಗೆದು ಇನ್ನಷ್ಟು ಹದಗೆಡಿಸಿಟ್ಟಿದೆ. ಕಲ್ಲು ಧೂಳಿನ ಮಧ್ಯ ಪ್ರಯಾಣ ಮಾಡುತ್ತಾ ಪ್ರಯಾಣಿಕರು ಹಿಡಿಶಾಪ ಹಾಕುತ್ತಿದ್ದಾರೆ