ಬೇಹುಗಾರಿಕೆಯ ಹೊಸ ರೂಪ; ಒಂದು ಲಿಂಕ್ ಕ್ಲಿಕ್ ಮಾಡಿದ್ರೆ ಮುಗೀತು ಕಥೆ!

Nov 2, 2019, 5:42 PM IST

ವಾಟ್ಸಪ್‌ ಬಳಸಿ ದೇಶದ ಪತ್ರಕರ್ತರು ಹಾಗೂ ಸಾಮಾಜಿಕ ಹೋರಾಟಗಾರರ ಮೊಬೈಲ್‌ನಲ್ಲಿರುವ ಮಾಹಿತಿ ಕಳವು ಮಾಡಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ.  ಇಸ್ರೇಲ್‌ನ ಪೆಗಾಸಸ್‌ ಎಂಬ ಬೇಹುಗಾರಿಕಾ ಸಾಫ್ಟ್‌ವೇರ್‌ ಬಳಸಿ ಭಾರತೀಯರು ಸೇರಿದಂತೆ ವಿಶ್ವದ 4 ಖಂಡಗಳ 1400 ಮಂದಿಯ ಮೊಬೈಲ್ ಗೆ ಕನ್ನ ಹಾಕಲಾಗಿದೆ ಎಂದು ಸ್ವತ: ವಾಟ್ಸಪ್ ಬಹಿರಂಗಪಡಿಸಿದೆ. ವಾಟ್ಸಪ್‌ ನೀಡಿರುವ ಮಾಹಿತಿಯಿಂದ ವಿಶ್ವಾದ್ಯಂತ ಬಿರುಗಾಳಿ ಎದ್ದಿದೆಯಾದರೂ, ಅದನ್ನು ಮಾಡಿಸಿರುವುದು ಯಾರು ಎಂಬುದು ಮಾತ್ರ ನಿಗೂಢವಾಗಿದೆ. 

ಯಾವುದೋ ಒಂದು ಲಿಂಕ್‌ ಅನ್ನು ವಾಟ್ಸಪ್‌ ಬಳಕೆದಾರರಿಗೆ ಕಳುಹಿಸಿ ಅದನ್ನು ಕ್ಲಿಕ್‌ ಮಾಡಲು ಸೂಚನೆ ನೀಡುವುದು ಅಥವಾ ವಾಟ್ಸಪ್‌ ವಿಡಿಯೋ ಮಿಸ್ಡ್‌ ಕಾಲ್‌ ನೀಡಿ ಪೆಗಾಸಸ್‌ ಸಾಫ್ಟ್‌ವೇರ್‌ ಮೂಲಕ ಮೊಬೈಲ್‌ ಫೋನ್‌ ಹ್ಯಾಕ್‌ ಮಾಡಲಾಗಿದೆ. ಇಲ್ಲಿದೆ ಮತ್ತಷ್ಟು ವಿವರ....