ಕೈ ಹಿಡಿದ ಪತ್ನಿಗೂ ಸಂಕಷ್ಟ ತಂದಿಟ್ಟರಾ ಮಾಜಿ ಸಚಿವ ನಾಗೇಂದ್ರ..?

Jul 18, 2024, 11:23 AM IST

ಆಕೆ ಅಗ್ನಿಸಾಕ್ಷಿಯಾಗಿ ಮಾಜಿ ಸಚಿವ ನಾಗೇಂದ್ರ ಅವರ ಕೈ ಹಿಡಿದ ಹೆಣ್ಣು ಮಗಳು. ನಾಗೇಂದ್ರ ಜೊತೆ ಸಪ್ತಪದಿ ತುಳಿದು ಜೀವನ ಪೂರ್ತಿ ಜೊತೆ ಜೊತೆಯಲ್ಲೇ ಸಾಗುವ ಪ್ರತಿಜ್ಞೆ ಮಾಡಿದವಳು.. ವಿಪರ್ಯಾಸ ಏನಂದ್ರೆ, ಬಹುಕೋಟಿ ಅಕ್ರಮ ಕೇಸ್'ನಲ್ಲಿ ಗಂಡ ಅರೆಸ್ಟ್ ಆದ ಬೆನ್ನಲ್ಲೇ ಹೆಂಡತಿಗೂ ಜೊತೆ ಜೊತೆಯಲ್ಲೇ ಸಂಕಷ್ಟ ಎದುರಾಗಿದೆ. ವಾಲ್ಮೀಕಿ ನಿಗಮದಲ್ಲಿ ನಡೆದಿರೋ ಬಹುಕೋಟಿ ಅಕ್ರಮದ ಸೂತ್ರಧಾರ ಮಾಜಿ ಸಚಿವ ನಾಗೇಂದ್ರ.. ಗಂಡನ ಅಕ್ರಮದಲ್ಲೀಗ ಹೆಂಡತಿಗೂ ಕಾನೂನು ಸಂಕಷ್ಟ ಎದುರಾಗಿದೆ.  ಕೈ ಹಿಡಿದ ಗಂಡನ ಕಾರಣಕ್ಕೆ ಇ.ಡಿ ಜಾಲಕ್ಕೆ ಬಿದ್ದಿದ್ದಾರೆ ಮಾಜಿ ಸಚಿವ ನಾಗೇಂದ್ರ ಅವರ ಪತ್ನಿ. ಇದ್ರ ಜೊತೆಗೆ ಕಮಿಷನ್ ಆಸೆಗೆ ಬಿದ್ದು ಅಕ್ರಮ ಹಣ ವರ್ಗಾವಣೆಯಲ್ಲಿ ಭಾಗಿಯಾಗಿದ್ದವರಿಗೂ ಸಂಕಷ್ಟ ಎದುರಾಗಿದೆ ವಾಲ್ಮೀಕಿ ನಿಗಮದ ಬ್ರಹ್ಮಾಂಡ ಭ್ರಷ್ಟಾಚಾರ ಪ್ರಕರಣದಲ್ಲಿ ನಾಗೇಂದ್ರ ಅವರ ಪತ್ನಿಯೂ ಇ.ಡಿ ಬಲೆಗೆ ಬಿದ್ದಿದ್ದಾರೆ. ಅಷ್ಟಕ್ಕೂ ಈ ಕೇಸ್'ನಲ್ಲಿ ನಾಗೇಂದ್ರ ಪತ್ನಿಯ ಪಾತ್ರವೇನು..? ಗಂಡನ ಜೊತೆ ಹೆಂಡತಿಯನ್ನೂ ಇ.ಡಿ ಅಧಿಕಾರಿಗಳು ಲಾಕ್ ಮಾಡಿದ್ದೇಕೆ..? ಇಲ್ಲಿದೆ ನೋಡಿ ಆ ಇಂಟ್ರೆಸ್ಟಿಂಗ್ ಸ್ಟೋರಿ.