ತೆರವಾದ ದೇಗುಲ ಪುನರ್ ನಿರ್ಮಾಣಕ್ಕೆ ಮುಂದಾದ ಸರ್ಕಾರ, ಆದರೆ ಸಿಎಸ್‌ರಿಂದ ಬ್ರೇಕ್.!

Sep 18, 2021, 11:00 AM IST

ಮೈಸೂರು (ಸೆ. 18): ಅನಧಿಕೃತ ಎಂಬ ನೆಪದಲ್ಲಿ ದೇಗುಲ ತೆರವು ಮಾಡಿರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ಸಾಕಷ್ಟು ಪ್ರತಿಭಟನೆಗಳು ನಡೆದಿವೆ. ಇದೀಗ ಸರ್ಕಾರ ಎಚ್ಚೆತ್ತುಕೊಂಡಿದ್ದು, ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದೆ.

'IAS ಅಧಿಕಾರಿಗಳನ್ನು ಜ್ಞಾನಿಗಳು ಅಂತೀವಿ, ಆದ್ರೆ ಸುಪ್ರೀಂ ಆದೇಶವನ್ನು ಅರ್ಥೈಸ್ಕೊಳೋಕೆ ಬರಲ್ಲ'

ತೆರವಾದ ದೇಗುಲ ಪುನರ್ ನಿರ್ಮಾಣಕ್ಕೆ ಸರ್ಕಾರ ಹಣ ಕೊಡಲು ಮುಂದಾಗಿದೆ. ಪ್ರತಿ ದೇಗುಲ ಪುನರ್ ನಿರ್ಮಾಣಕ್ಕೆ 10 ಲಕ್ಷ ರೂ ನೀಡಲು ಚಿಂತನೆ ನಡೆಸಿದೆ. ಆದರೆ ಸರ್ಕಾರದ ಚಿಂತನೆಗೆ ಅಧಿಕಾರಿ ವರ್ಗದಿಂದ ತೀವ್ರ ವಿರೋಧ ವ್ಯಕ್ತವಾಗಿದೆ.  ದೇಗುಲ ಪುನರ್ ನಿರ್ಮಾಣಕ್ಕೆ ಹಣ ಕೊಟ್ಟರೆ ಹೊರೆಯಾಗಲಿದೆ. ಸ್ಥಳಾಂತರಗೊಂಡ ದೇವಾಲಯಗಳಿಂದಲೂ ಬೇಡಿಕೆ ಬರಲಿದೆ.  ಕಾನೂನು ತಜ್ಞರ ಸಲಹೆ ಪಡೆಯಲು ಮುಖ್ಯ ಕಾರ್ಯದರ್ಶಿ ಸಲಹೆ ನೀಡಿದ್ದಾರೆ.