ಪ್ರಜ್ವಲ್ ರೇವಣ್ಣನ ವಿದೇಶಕ್ಕೆ ಕಳುಹಿಸಿದ್ದೇ ದೇವೇಗೌಡರು, ಸಿದ್ದರಾಮಯ್ಯ ತಿರುಗೇಟು!

May 23, 2024, 11:26 PM IST

ಪ್ರಜ್ವಲ್ ರೇವಣ್ಣ ತಕ್ಷಣವೇ ಭಾರತಕ್ಕೆ ಬಂದು ಪೊಲೀಸರಿಗೆ ಶರಣವಾಗಬೇಕು. ಇದು ಮನವಿಯಲ್ಲ, ನನ್ನ ಎಚ್ಚರಿಕೆ ಎಂದು ಮಾಜಿ ಪ್ರಧಾನಿ ದೇವೇಗೌಡರು ವಾರ್ನಿಂಗ್ ನೀಡಿದ್ದಾರೆ. ಆದರೆ ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಜ್ವಲ್ ರೇವಣ್ಣನನ್ನು ವಿದೇಶಕ್ಕೆ ಕಳುಹಿಸಿದ್ದೇ ದೇವೇಗೌಡರು, ಇದೀಗ ಪತ್ರ ಬರೆಯುವ ನಾಟಕವಾಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇತ್ತ ರೇವಣ್ಣ ಪಾಸ್‌ಪೋರ್ಟ್ ರದ್ದು ಮಾಡಲು ರಾಜ್ಯ ಪೊಲೀಸರು, ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆದಿದೆ.