Defection Politics: ನಮ್ಮ ಬಸ್ ಏನೂ ಖಾಲಿ ಇಲ್ಲ, ಯಾರನ್ನೂ ಹತ್ತಿಸ್ಕೊಳಲ್ಲ: ರೇವಣ್ಣ

Jan 28, 2022, 5:04 PM IST

ಬೆಂಗಳೂರು (ಜ. 28): JDS  ರಾಜ್ಯ ರಾಜಕೀಯದಲ್ಲಿ ಪಕ್ಷಾಂತ ಪಾಲಿಟಿಕ್ಸ್ (Defection Politics) ಬಿರುಗಾಳಿ ಎಬ್ಬಿಸಿದೆ. ಬಿಜೆಪಿ, ಜೆಡಿಎಸ್ ಕೆಲ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ, ಅವರ ಹೆಸರನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ (Siddaramaiah) ಹೇಳಿದ್ದರು. ಇವರ ಹೇಳಿಕೆ ಸಂಚಲನ ಹುಟ್ಟು ಹಾಕಿತ್ತು.  ಇದೀಗ ಮೇಲುಕೋಟೆ ಜೆಡಿಎಸ್ ಶಾಸಕ ಪುಟ್ಟರಾಜು (Puttaraju) ಕಾಂಗ್ರೆಸ್ ಸೇರ್ತಾರಾ ಎಂಬ ಸಾಧ್ಯತೆ ದಟ್ಟವಾಗಿದೆ.

Defection Politics: ಜೆಡೆಸ್‌ಗೆ ಗುಡ್‌ಬೈ ಹೇಳ್ತಾರಾ ಶಾಸಕ ಪುಟ್ಟರಾಜು..?

'ಒಂದು ಪಕ್ಷದವರು ಇನ್ನೊಂದು ಪಕ್ಷದವರನ್ನು ಭೇಟಿ ಆಗಬಾರದಾ.? ಯಾವುದೋ ಕಾರ್ಯಕ್ರಮಕ್ಕೆ ಆಹ್ವಾನ ನೀಡಲು ಬಂದಿರುತ್ತಾರೆ. ಇವೆಲ್ಲಾ ಕಾಮನ್. ನಮ್ಮ ಬಸ್ ಏನೂ ಖಾಲಿ ಇಲ್ಲ' ಎಂದು ಶಾಸಕ ಎಚ್‌ಡಿ ರೇವಣ್ಣ ಪ್ರತಿಕ್ರಿಯಿಸಿದ್ದಾರೆ.