Hassan: ರೇವಣ್ಣ- ಪ್ರೀತಂಗೌಡ ನಡುವೆ ತಾರಕಕ್ಕೇರಿದ ಟ್ರಕ್‌ ಟರ್ಮಿನಲ್‌ ವಿವಾದ: ನಿಷೇಧಾಜ್ಞೆ ಜಾರಿ

May 1, 2022, 9:41 AM IST

ಹಾಸನ (ಮೇ. 01): ಜೆಡಿಎಸ್-ಬಿಜೆಪಿ ಬಡಿದಾಟಕ್ಕೆ ಹಾಸನ (Hassan) ರಣರಂಗವಾಯ್ತು. ಕೆಂಚಟ್ಟಹಳ್ಳಿ ಟ್ರಕ್ ಟರ್ಮಿನಲ್ (Truck Terminal) ವಿಚಾರಕ್ಕೆ ರೇವಣ್ಣ- ಪ್ರೀತಂ ಗೌಡ  (Prethan Gowda) ಟೀಂ ನಡುವ ವಾಕ್ಸಮರ ನಡೆದಿದೆ.   ಲಾರಿಗಳ ನಿಲುಗಡೆಯ ಟ್ರಕ್‌ ಟರ್ಮಿನಲ್‌ ಕಾಮಗಾರಿ ವಿವಾದ ಇದೀಗ ಅಕ್ಷರಶಃ ರಾಜಕೀಯ ತಿರುವು ಪಡೆದುಕೊಂಡಿದೆ. 

ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ 4 'ENBA' ಪ್ರಶಸ್ತಿ, ಬೆಸ್ಟ್ ಕರೆಂಟ್ ಅಫೇರ್ಸ್‌ನಲ್ಲಿ ಚಿನ್ನ

ಸ್ಥಳಕ್ಕೆ ಹೊಳೆನರಸೀಪುರ ಶಾಸಕ ಎಚ್‌.ಡಿ.ರೇವಣ್ಣ ಬಂದಾಗ ಅಲ್ಲಿದ್ದ ಕೆಂಚಟ್ಟಳ್ಳಿ ಜನರು ಕಾಮಗಾರಿಗೆ ಸರ್ವೇ ಮಾಡಿ ಹಾಕಲಾಗಿದ್ದ ಕಂಬಗಳನ್ನು ಗ್ರಾಮಸ್ಥರು ಮುರಿಯಲು ಮುಂದಾದರು. ಆಗ ಸ್ಥಳದಲ್ಲಿದ್ದ ಶಾಸಕ ರೇವಣ್ಣ ಮೂಕ ಪ್ರೇಕ್ಷಕರಾಗಿದ್ದು, ಪೊಲೀಸರು ಗ್ರಾಮಸ್ಥರನ್ನು ತಡೆದರು.

ಟ್ರಕ್‌ ಟರ್ಮಿನಲ್‌ ವಿಚಾರವಾಗಿ ಕಾಮಗಾರಿ ನಿಲ್ಲಿಸುವಂತೆ ಅನೇಕ ಬಾರಿ ಕೆಂಚಟಹಳ್ಳಿ ಗ್ರಾಮಸ್ಥರು ಹಾಗೂ ಹೇಮಗಂಗೋತ್ರಿ ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾ​ಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಆದರೆ ವಿರೋಧದ ನಡುವೆಯೂ ನಿರ್ಮಿಸಲು ಶಾಸಕರು ಹೊರಟಿದ್ದರು. ಕೆಲದಿನ ಕೆಲಸ ಸ್ಥಗಿತ ಮಾಡಲಾಗಿತ್ತು. ಶನಿವಾರ ಮತ್ತೆ ಕಾಮಗಾರಿ ಆರಂಭಿಸಿದಾಗ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚಿನ ಪೊಲೀಸ್‌ ಭದ್ರತೆ ಒದಗಿಸಲಾಯಿತು. ಟ್ರಕ್‌ ಟರ್ಮಿನಲ್‌ ವಿವಾದ ತೀವ್ರ ಸ್ವರೂಪ ಪಡೆದ ಹಿನ್ನೆಲೆಯಲ್ಲಿ , ವಿವಾದಿತ ಸ್ಥಳದ 2 ಕಿ.ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.