ACB Raids: ಹೈಸ್ಕೂಲ್‌ನಲ್ಲಿ ಜವಾನ,ಇಬ್ಬರು ಹೆಂಡಿರ ಮುದ್ದಿನ ಯಜಮಾನ,ಸಿಕ್ಕಿ ಬಿದ್ದ ಖದೀಮ!

Nov 26, 2021, 6:10 PM IST

ಬೆಂಗಳೂರು (ನ. 26): ರಾಜ್ಯದ ವಿವಿಧೆಡೆ ಏಕಕಾಲಕ್ಕೆ ದಾಳಿ ನಡೆಸಿ 15 ಭ್ರಷ್ಟರ ಬೆವರಿಳಿಸಿದ್ದ ಭ್ರಷ್ಟಾಚಾರ ನಿಗ್ರಹ ದಳ (ACB) ಅಧಿಕಾರಿಗಳು ಒಟ್ಟು 72.57 ಕೋಟಿ ರು. ಮೌಲ್ಯದ ಆಸ್ತಿ-ಪಾಸ್ತಿಯನ್ನು ಪತ್ತೆ ಮಾಡಿದ್ದಾರೆ. ಸಿಕ್ಕಿ ಬಿದ್ದ ಭ್ರಷ್ಟರ ಒಬ್ಬೊಬ್ಬರ ಹಿಸ್ಟರಿ ಒಂದೊಂದು ರೀತಿ. 

ACB Raid: ಬಗೆದಷ್ಟು ಬಯಲಾಗುತ್ತಲೇ ಇದೆ ಕಲಬುರಗಿ PWD ಜಿ ಶಾಂತಗೌಡರ ಸಂಪತ್ತು, ಎಸಿಬಿ ಶಾಕ್

 ಡಿ ಗ್ರೂಪ್‌ ನೌಕರ ಜಿ.ವಿ.ಗಿರಿ ಬಳಿ ಹೆಚ್ಚಿನ ಅಕ್ರಮ ಸಂಪತ್ತು ಪತ್ತೆಯಾಗಿದೆ. ಯಶವಂತಪುರದ ಮಾರಪ್ಪನಪಾಳ್ಯದಲ್ಲಿನ ಬಿಬಿಎಂಪಿ ಬಾಲಕ ಮತ್ತು ಬಾಲಕಿಯರ ಹೈಸ್ಕೂಲ್‌ನಲ್ಲಿ ಗ್ರೂಪ್‌-ಡಿ ನೌಕರನಾಗಿರುವ ಜಿ.ವಿ.ಗಿರಿ ಆದಾಯಕ್ಕೆ ಹೋಲಿಸಿದಾಗ ಸುಮಾರು ಶೇ.563.85 ರಷ್ಟು ಹೆಚ್ಚಿನ ಅಕ್ರಮ ಆಸ್ತಿ ಇರುವುದು ಕಂಡು ಬಂದಿದೆ. ತನಿಖೆಯಲ್ಲಿ 6.24 ಕೋಟಿ ರು. ಚಿನ್ನಾಭರಣ, ನಗದು, ವಾಹನಗಳು, ನಿವೇಶನ, ಕಟ್ಟಡ, ಗೃಹೋಪಯೋಗಿ ವಸ್ತುಗಳು, ಭೂಮಿ, ಬ್ಯಾಂಕ್‌ ಠೇವಣಿ ಇತ್ಯಾದಿಗಳು ದೊರೆತಿವೆ. ಈತನಿಗೆ ಇಬ್ಬರು ಹೆಂಡತಿಯರಿದ್ದು, ಇಬ್ಬರ ಹೆಸರಿನಲ್ಲೂ ಸಾಕಷ್ಟು ಆಸ್ತಿ ಮಾಡಿದ್ದಾರೆ.