May 6, 2024, 11:22 PM IST
ಬೆಂಗಳೂರು (ಮೇ.6): ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಪ್ರಕರಣದ ಸಂತ್ರಸ್ತೆಯನ್ನ ಕಿಡ್ನಾಪ್ ಆರೋಪದಲ್ಲಿ ಮಾಜಿ ಸಚಿವ ಎಚ್‌ಡಿ ರೇವಣ್ಣ ಬಂಧನವಾಗಿದೆ. ಭಾನುವಾರ ಅವರನ್ನು 4 ದಿನ ಎಸ್‌ಐಟಿ ಕಸ್ಟಡಿಗೆ ನ್ಯಾಯಾಧೀಶರು ನೀಡಿದ್ದರು.
ಮೇ 8ರವರೆಗೂ ನ್ಯಾಯಾಧೀಶರು ಎಸ್‌ಐಟಿ ವಶಕ್ಕೆ ನೀಡಿದ್ದಾರೆ. ಆದರೆ, ಎಸ್‌ಐಟಿ ವಿಚಾರಣೆಗೆ ಸಹಕರಿಸುತ್ತಿಲ್ಲ ಮಾಜಿ ಸಚಿವ ರೇವಣ್ಣ ಸಹಕಾರ ನೀಡುತ್ತಿಲ್ಲ. ಯಾವುದೇ ಪ್ರಶ್ನೆಗೂ ಉತ್ತರಿಸದೇ ರೇವಣ್ಣ ಅಸಹಕಾರ ತೋರಿದ್ದಾರೆ.
ಪ್ರಜ್ವಲ್ ರೇವಣ್ಣ ಕುರಿತಾಗಿ ಮೊದಲ ಬಾರಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ
ಎಸ್‌ಐಟಿ ಮುಂದೆ ಹೇಳಿಕೆ ಕೊಡಲು ರೇವಣ್ಣ ಹಿಂದೇಟು ಹಾಕಿದ್ದಾರೆ. ಅದೇನೇ ಪ್ರಶ್ನೆ ಕೇಳಿದರೂ, ‘ಏನೂ ಕೇಳಬೇಡಿ, ನನಗೇನು ಗೊತ್ತಿಲ್ಲ’ ಎಂದು ಹೇಳಿಕೆ ನೀಡಿದ್ದಾರೆ. ಬಂಧಿತ A2 ಸತೀಶ್ ಬಾಬು ನಿಮಗೆ ಪರಿಚಯವಾ? ಸತೀಶ್ ಬಾಬು ಮೂಲಕ ಕಿಡ್ನಾಪ್ ಮಾಡಿಸಲು ಹೇಳಿದ್ರಾ? ಸಂತ್ರಸ್ತೆಯನ್ನ ತೋಟದ ಮನೆಯಲ್ಲಿಡಲು ನೀವೇ ಹೇಳಿದ್ರಾ? ಸಂತ್ರಸ್ತೆಯ ಕಿಡ್ನಾಪ್ ಹಿಂದಿನ ನಿಮ್ಮ ಉದ್ದೇಶವೇನು? ಎಲ್ಲದಕ್ಕೂ ಅವರು ಒಂದೇ ಉತ್ತರ ನೀಡಿದ್ದಾರೆ.