Media ಕಿಡಿಗೇಡಿಗಳ ಕೈಗೆ ಸಿಗುವ ಅಸ್ತ್ರವಾಗಬಾರದು: ರವಿ ಹೆಗಡೆ

Jun 2, 2022, 10:16 PM IST

ರಾಯಚೂರು (ಜೂ.2): ಮಾಧ್ಯಮಗಳು (Media) ಅತ್ಯಂತ ವಿಶ್ವಾಸಾರ್ಹತೆ ಕಾಪಾಡಿಕೊಂಡು ಕೆಲಸ ಮಾಡಬೇಕು. ಮಾಧ್ಯಮಗಳು ಕಿಡಿಗೇಡಿಗಳ ಕೈಗೆ ಸಿಗುವ ಅಸ್ತ್ರವಾಗಬಾರದು ಎಂದು ಕನ್ನಡಪ್ರಭ (Kannadaprabha) ‌ಮತ್ತು ಏಷ್ಯಾನೆಟ್ ಸುವರ್ಣನ್ಯೂಸ್  ಪ್ರಧಾನ ಸಂಪಾದಕರಾದ ರವಿ ಹೆಗಡೆ (Ravi Hegde) ಹೇಳಿದರು. ಲಿಂಗಸೂಗೂರು ಪಟ್ಟಣದಲ್ಲಿ ನೂತನ  ಪತ್ರಿಕಾ ಭವನ ಲೋಕಾರ್ಪಣೆ ಮಾಡಿ ಮಾತನಾಡಿದರು. ಮಾಧ್ಯಮಗಳು ಹೇಳಿದ್ದೆ ಸತ್ಯ ಎನ್ನುವ ಹಾಗೆ ಬಿಂಬಿಸಿದ್ರೆ ಜನ ಪಾಠ ಕಲಿಸ್ತಾರೆ. ಟಿವಿ ಚಾನೆಲ್ ಟಿಆರ್ ಪಿ ಇತ್ತೀಚಿಗೆ ಕಡಿಮೆಯಾಗುತ್ತಿದೆ. 

SUVARNA NEWS REALITY CHECK; ಕೋಟಿ ಹಣ ಬಿಡುಗಡೆಯಾದ್ರೂ ಮಕ್ಕಳಿಗೆ ಕಳಪೆ ಬಿಸಿಯೂಟ!

ಕೋವಿಡ್ ಸಂದರ್ಭದಲ್ಲಿ ಜನ ಹೆಚ್ಷು ಸಿನಿಮಾ ನೋಡಲು ಒಲವು ತೋರಿಸಲು ಆರಂಭಿಸಿದ್ದಾರೆ. ಬೇರೆ ಭಾಷೆಯ ಸಿನಿಮಾಗಳು ಕನ್ನಡಕ್ಕೆ ಡಬ್ ಆಗುತ್ತಿದೆ. ಇಲ್ಲಿ ಸಿನೆಮಾ ರಂಗ ಮಾರ್ಕೆಟ್ ಕಳೆದುಕೊಳ್ಳತ್ತಿದೆ ಎಂದು ಅಂತ ಅಲ್ಲ. ಜನರು ಸಿನಿಮಾ ನೋಡುವುದು ಒಟಿಟಿ ಸೇರಿದಂತೆ ‌ನಾನಾ ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ಹಾಗೆ ನಾವು ತೊರಿಸಿದ್ದೆ ಸುದ್ದಿ ಎಂಬ ಅಹಂಕಾರಕ್ಕೆ ಹೊದ್ರೆ ಜನ ಒಳ್ಳೆದನ್ನ ನೊಡಲು ಆರಂಭಿಸ್ತಾರೆ.  ಸಾಮಾಜಿಕ ಜಾಲತಾಣವಾದ ವಾಟ್ಸಾಪ್ ನಲ್ಲಿ  ಬಂದಷ್ಟು ಸುದ್ದಿ ಯಾವ ಪತ್ರಿಕೆ ಚಾನೆಲ್ ಳಲ್ಲಿ ಬರಲ್ಲ ಎಂದು ಹೇಳಿದರು. ಯುಟ್ಯೂಬ್ ಭೂಮಿ ಮೇಲಿರುವ ಅತ್ಯಂತ ದೊಡ್ಡ ಚಾನೆಲ್. ಆದ್ರೆ ಅದರ ಜತೆಗೆ ಅಪಾಯವೂ ಹೆಚ್ಚಾಗುತ್ತಿದೆ. ಸುಳ್ಳು ಸುದ್ದಿ ಹರಡುವ ಆತಂಕ ಎದುರಿಸುವಂತಾಗಿದೆ ಎಂದು ಹೇಳಿದರು.