ಪುಷ್ಪ 2 ಐಟಂ ಹಾಡು ಬಿಡುಗಡೆಗೂ ಮುನ್ನ ಕಾಶಿ ವಿಶ್ವನಾಥನ ದರ್ಶನ ಪಡೆದ ನಟಿ ಶ್ರೀಲೀಲಾ

First Published | Nov 24, 2024, 10:56 AM IST

ಡ್ಯಾನ್ಸಿಂಗ್ ಕ್ವೀನ್ ಎಂದೇ ಖ್ಯಾತಿ ಪಡೆದಿರುವ ನಟಿ ಶ್ರೀಲೀಲಾ ತಮ್ಮ ಮುಂದಿನ ಚಿತ್ರವಾದ ಪುಷ್ಪ 2 ಹಾಡು ಬಿಡುಗಡೆಗೂ ಮುನ್ನ ಕಾಶಿ ವಿಶ್ವನಾಥನ ದರ್ಶನ ಪಡೆದು ಬಂದಿದ್ದಾರೆ. 
 

ಕನ್ನಡದ ನಟಿ ಶ್ರೀಲೀಲಾ (Sreeleela) ದೊಡ್ಡ ಮಟ್ಟದಲ್ಲಿ ಸದ್ದು ಮಾಡೋದಕ್ಕೆ ರೆಡಿಯಾಗ್ತಿದ್ದಾರೆ. ಇವರು ಅಲ್ಲು ಅರ್ಜುನ್‌ ಅಭಿನಯದ ಪುಷ್ಫ 2 ಸಿನಿಮಾದಲ್ಲಿ, ‘ಕಿಸ್ಸಿಕ್’ ಎನ್ನುವ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದು, ಈ ಹಾಡು ಇಂದು ಅಂದರೆ ನ.24ರಂದು ರಿಲೀಸ್ ಆಗಲಿದೆ. ‘

ಪುಷ್ಪ 2’ (Pushpa 2) ಚಿತ್ರದ ಈ ಬಹು ನಿರೀಕ್ಷಿತ ಐಟಂ ನಂಬರ್ ರಿಲೀಸ್‌ಗೂ ಮುನ್ನ ಅಮ್ಮನ ಜೊತೆ ಶ್ರೀಲೀಲಾ ವಾರಣಾಸಿಗೆ (Varanasi) ಭೇಟಿ ನೀಡಿ, ಕಾಶಿ ವಿಶ್ವನಾಥನ ದರ್ಶನ ಪಡೆದು ಬಂದಿದ್ದಾರೆ. ಜೊತೆ ವಿಶೇಷ ಪೂಜೆ ಕೂಡ ಸಲ್ಲಿಸಿದ್ದಾರೆ. 
 

Tap to resize

ಸೋಶಿಯಲ್ ಮೀಡೀಯಾದಲ್ಲಿ (Social media) ಫೋಟೊಗಳನ್ನು ಶೇರ್ ಮಾಡಿರುವ ಶ್ರೀಲೀಲಾ, ಗಂಗಾ ನದಿಯಲ್ಲಿ ಬೋಟಿಂಗ್ ಮಾಡುತ್ತಾ, ಹಕ್ಕಿಗಳಿಗೆ ಆಹಾರ ನೀಡುವ ಮುದ್ದಾದ ಫೋಟೊಗಳನ್ನು ಶೇರ್ ಮಾಡಿದ್ದಾರೆ. ಈ ಫೋಟೊಗಳಲ್ಲಿ ಸಲ್ವಾರ್ ಧರಿಸಿದ್ದು, ಹಣೆತುಂಬಾ ಕುಂಕುಮ ಪ್ರಸಾದ ಇದೆ. 
 

ಈ ಫೋಟೊಗಳಿಗೆ ಅಭಿಮಾನಿಗಳು ಪ್ರೀತಿಯ ಮಳೆ ಸುರಿಸಿದ್ದು, ಪುಷ್ಪ ಹಾಡಿಗಾಗಿ ಕಾಯುತ್ತಿರೋದಾಗಿ ತಿಳಿಸಿದ್ದಾರೆ. ಈಗಾಗಲೇ ಹಾಡಿನ ಪ್ರೊಮೊ ರಿಲೀಸ್ ಆಗಿದ್ದು, ಅದು ಮತ್ತಷ್ಟು ಕುತೂಹಲವನ್ನು ಹೆಚ್ಚಿಸಿದೆ. 
 

ಕನ್ನಡ ಕಿಸ್ ಸಿನಿಮಾದ ಮೂಲಕ ನಟನೆಗೆ ಎಂಟ್ರಿ ಕೊಟ್ಟ ಶ್ರೀಲೀಲಾ ಸದ್ಯ ತೆಲುಗಿನ ಸೂಪರ್ ಸ್ಟಾರ್ ನಟಿಯಾಗಿದ್ದಾರೆ. ಈಕೆಯ ಡ್ಯಾನ್ಸ್ ಗೆ ಈಗಾಗಲೇ ಜನರು ಫಿದಾ ಆಗಿದ್ದಾರೆ, ಹಾಗಾಗಿ ಪುಷ್ಪ 2 ಸಿನಿಮಾದ ಐಟಂ ಹಾಡಿಗೆ ಭಾರಿ ನಿರೀಕ್ಷೆ ಹುಟ್ಟಿಕೊಂಡಿದೆ. 
 

ಇನ್ನು ಬಹು ನಿರೀಕ್ಷಿತ ‘ಪುಷ್ಪ 2’ ಸಿನಿಮಾ ಡಿಸೆಂಬರ್ 5ಕ್ಕೆ ರಿಲೀಸ್ ಆಗಲಿದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ (Rashmika Mandanna), ಡಾಲಿ ಧನಂಜಯ, ಫಹಾದ್ ಫಾಸಿಲ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಚಿತ್ರವನ್ನು ಸುಕುಮಾರ್ ನಿರ್ದೇಶನ ಮಾಡಿದ್ದಾರೆ.
 

Latest Videos

click me!