ಮಲ್ಲೇಶ್ವರಂನ ಬ್ಯಾಂಕ್ ಸಿಬ್ಬಂದಿಗೆ ಅಂಟಿದ ಕೊರೋನಾ ಸೋಂಕು

Jun 3, 2020, 7:27 PM IST

ಬೆಂಗಳೂರು(ಜೂ.03): ಕೊರೋನಾ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚತ್ತಲೇ ಇದೆ. ಇದೀಗ ನಗರದ ಮಲ್ಲೇಶ್ವರಂ ಬ್ಯಾಂಕ್ ಸಿಬ್ಬಂದಿಗೆ ಕೊರೋನಾ ಸೋಂಕು ತಗುಲಿರುವುದು ಖಚಿತವಾಗಿದೆ. 

ಮಲ್ಲೇಶ್ವರಂನಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ಸಿಬ್ಬಂದಿಗೆ ಕೋವಿಡ್ 19 ಸೋಂಕು ತಗುಲಿರುವುದು ದೃಢಪಟ್ಟಿದೆ. 46 ವರ್ಷದ ಮಹಿಳೆ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಈ ಬ್ಯಾಂಕಿಗೆ ಭೇಟಿ ನೀಡಿ ವ್ಯವಹಾರಗಳನ್ನು ಏನಾದರೂ ನಡೆಸಿದ್ದರೆ ಮೊದಲು ನೀವು ನಿಮ್ಮ ಟೆಸ್ಟ್ ಮಾಡಿಸಿಕೊಳ್ಳಿ.

ಸರ್ಕಾರಿ ಕ್ವಾರಂಟೈನ್ ಅವಧಿಯನ್ನು 7 ದಿನಕ್ಕೆ ಕಡಿತ

ಈ ಮಹಿಳೆ ಬ್ಯಾಂಕಿನಲ್ಲಿ ಹೌಸ್ ಕೀಪಿಂಗ್ ಕೆಲಸವನ್ನು ಮಾಡುತ್ತಿದ್ದರು. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.