100 ಕೆಜಿ ಭಾರ ಎತ್ತಿದ ರಶ್ಮಿಕಾ ಮಂದಣ್ಣ: ಎಲ್ಲಾ ನೈಟ್‌ ಶಿಫ್ಟ್‌ ಪ್ರಭಾವ ಎಂದಿದ್ಯಾಕೆ

Published : May 03, 2024, 10:57 AM IST

ರಶ್ಮಿಕಾ ಮಂದಣ್ಣ ಸದ್ಯ ಸ್ಟಾರ್ ನಟ ಧನುಷ್ ಜೊತೆ 'ಕುಬೇರ' ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ತಮ್ಮ ಮುಂದಿನ ಚಿತ್ರಕ್ಕಾಗಿನ ತಮ್ಮ ಶ್ರಮವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 

PREV
17
100 ಕೆಜಿ ಭಾರ ಎತ್ತಿದ ರಶ್ಮಿಕಾ ಮಂದಣ್ಣ: ಎಲ್ಲಾ ನೈಟ್‌ ಶಿಫ್ಟ್‌ ಪ್ರಭಾವ ಎಂದಿದ್ಯಾಕೆ

ಚೋಟುದ್ದದ ಬಳುಕೋ ಬಳ್ಳಿ ರಶ್ಮಿಕಾ ಮಂದಣ್ಣ ಬರೋಬ್ಬರಿ 100 ಕೆಜಿ ಭಾರ ಎತ್ತಿದ್ದಾರೆ. ಇದು ಹೇಗೆ ಸಾಧ್ಯ ಅಂತ ಹುಬ್ಬೇರಿಸಿದವರಿಗೆ ‘ಎಲ್ಲಾ ನೈಟ್‌ ಶಿಫ್ಟ್‌ ಪ್ರಭಾವ’ ಅಂತ ಉತ್ತರ ನೀಡಿದ್ದಾರೆ. 

27

ಮುಂಬೈಯಲ್ಲಿ ರಶ್ಮಿಕಾ ಮಂದಣ್ಣ ಹಾಗೂ ತಮಿಳು ಸ್ಟಾರ್‌ ನಟ ಧನುಷ್‌ ಅಭಿನಯದ ‘ಕುಬೇರ’ ಸಿನಿಮಾ ಶೂಟಿಂಗ್‌ ಭರದಿಂದ ನಡೆಯುತ್ತಿದೆ. ಆದರೆ ಇದು ನೈಟ್‌ ಶೂಟ್‌. 
 

37
Rashmika Mandanna

ನಿತ್ಯ ನಡೆಯುವ ಈ ನೈಟ್‌ ಶೂಟ್‌ನಿಂದ ನನ್ನ ರಾತ್ರಿ ಹಗಲಾಗಿದೆ, ಹಗಲು ರಾತ್ರಿ ಆಗಿದೆ. ಈ ನೈಟ್‌ಶೂಟ್‌ನಿಂದ ಸರಿಯಾಗಿ ವರ್ಕೌಟ್‌ ಮಾಡೋದಕ್ಕೂ ಸಾಧ್ಯವಾಗುತ್ತಿಲ್ಲ. ಇದರಿಂದ ಮನಸ್ಸಿಗೆ ಚಡಪಡಿಕೆ ಆಗುತ್ತದೆ. ಈ ಮೈಂಡ್‌ಸೆಟ್‌ನಲ್ಲಿ ರಾತ್ರಿ ಶೂಟ್‌ಗೆ ಹೋಗೋ ಮೊದಲು ವರ್ಕೌಟ್‌ ಮಾಡುತ್ತೇನೆ. 

47

100 ಕೆಜಿ ಭಾರ ಎತ್ತುವ ಸಾಹಸವನ್ನೂ ಮಾಡಿದ್ದೇನೆ ಎಂದಿದ್ದಾರೆ. ನೈಟ್‌ ಶೂಟ್‌ ಮುಗಿಸಿ ಬಂದು ಮಧ್ಯಾಹ್ನ ಹನ್ನೆರಡಕ್ಕೆ ಮಲಗಿ ಸಂಜೆ ಆರಕ್ಕೆ ಏಳುವ ಹಿಂಸೆ ಯಾರಿಗೂ ಬೇಡ ಅಂತಲೂ ರಶ್ಮಿಕಾ ಹೇಳಿಕೊಂಡಿದ್ದಾರೆ.
 

57

ಕುಬೇರ ಚಿತ್ರದಲ್ಲಿ ರಶ್ಮಿಕಾ, ಧನುಷ್ ಅಲ್ಲದೇ ನಾಗಾರ್ಜುನ ಮತ್ತು ಜಿಮ್ ಸರ್ಭ್ ಸೇರಿ ಹಲವರು ನಟಿಸುತ್ತಿದ್ದಾರೆ. ಚಿತ್ರವನ್ನು ಸೋನಾಲಿ ನಾರಂಗ್ ಪ್ರಸ್ತುತಪಡಿಸುತ್ತಿದ್ದಾರೆ. 

67

ಅಮಿಗೋಸ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಸಹಯೋಗದೊಂದಿಗೆ ಶ್ರೀ ವೆಂಕಟೇಶ್ವರ ಸಿನಿಮಾಸ್ ಎಲ್‌ಎಲ್‌ಪಿ ಅವರ ಬ್ಯಾನರ್ ಅಡಿಯಲ್ಲಿ ಸುನೀಲ್ ನಾರಂಗ್ ಮತ್ತು ಪುಷ್ಕುರ್ ರಾಮ್ ಮೋಹನ್ ರಾವ್ ನಿರ್ಮಿಸುತ್ತಿದ್ದಾರೆ.

77

ಸಂದೀಪ್ ರೆಡ್ಡಿ ವಂಗಾ ಅವರ ಬ್ಲಾಕ್‌ ಬಸ್ಟರ್ ಹಿಟ್ 'ಅನಿಮಲ್‌'ನಲ್ಲಿ ಕೊನೆಯದಾಗಿ ಕಾಣಿಸಿಕೊಂಡಿರುವ ರಶ್ಮಿಕಾ ಅವರ ಮೂರ್ನಾಲ್ಕು ಚಿತ್ರಗಳ ಕೆಲಸಗಳು ಭರದಿಂದ ಸಾಗಿದೆ. ಪುಷ್ಪ 2: ದಿ ರೂಲ್, ರೈನ್​​ಬೋ, ದಿ ಗರ್ಲ್‌ಫ್ರೆಂಡ್ ಮತ್ತು ಛಾವಾ ನಟಿಯ ಮುಂದಿನ ಸಿನಿಮಾಗಳು.
 

Read more Photos on
click me!

Recommended Stories