Asianet Suvarna News Asianet Suvarna News

ಸರ್ಕಾರಿ ಕ್ವಾರಂಟೈನ್ ಅವಧಿಯನ್ನು 7 ದಿನಕ್ಕೆ ಕಡಿತ

ಸರ್ಕಾರಿ ಕ್ವಾರಂಟೈನ್ ಅವಧಿಯನ್ನು 7 ದಿನಕ್ಕೆ ಮೊಟಕುಗೊಳಿಸಲಾಗಿದೆ. ಹೊರರಾಜ್ಯಗಳಿಂದ ಬರುವವರಿಗೆ ಸರ್ಕಾರಿ ಕ್ವಾರಂಟೈನನ್ನು ರದ್ದುಗೊಳಿಸಲಾಗಿದೆ. ಸಾವಿರಾರು ಜನರನ್ನು ಕ್ವಾರಂಟೈನ್ ಮಾಡುವುದು ಕಷ್ಟ. ಈ ಕಾರಣಕ್ಕಾಗಿ ಕ್ವಾರಂಟೈನ್ ಅವಧಿಯನ್ನು 7 ದಿನಕ್ಕೆ ಮೊಟಕುಗೊಳಿಸಲಾಗಿದೆ ಎಂದು ಉಡುಪಿಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಹೇಳಿದ್ದಾರೆ. 

ಬೆಂಗಳೂರು (ಜೂ. 03): ಸರ್ಕಾರಿ ಕ್ವಾರಂಟೈನ್ ಅವಧಿಯನ್ನು 7 ದಿನಕ್ಕೆ ಮೊಟಕುಗೊಳಿಸಲಾಗಿದೆ. ಹೊರರಾಜ್ಯಗಳಿಂದ ಬರುವವರಿಗೆ ಸರ್ಕಾರಿ ಕ್ವಾರಂಟೈನನ್ನು ರದ್ದುಗೊಳಿಸಲಾಗಿದೆ. ಸಾವಿರಾರು ಜನರನ್ನು ಕ್ವಾರಂಟೈನ್ ಮಾಡುವುದು ಕಷ್ಟ. ಈ ಕಾರಣಕ್ಕಾಗಿ ಕ್ವಾರಂಟೈನ್ ಅವಧಿಯನ್ನು 7 ದಿನಕ್ಕೆ ಮೊಟಕುಗೊಳಿಸಲಾಗಿದೆ ಎಂದು ಉಡುಪಿಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಹೇಳಿದ್ದಾರೆ. 

ಕೋವಿಡ್ 19 ನಿಭಾಯಿಸುವಲ್ಲಿ ಬೆಂಗಳೂರು ನಂ 1 ಆಗಿದ್ಹೇಗೆ?

'ಕಂಟೈನ್ಮೆಂಟ್ ಝೋನ್ ವ್ಯಾಪ್ತಿಯನ್ನು ಕಡಿತಗೊಳಿಸಲಾಗುತ್ತಿದೆ. ಸೋಂಕಿತನ ಮನೆಯ 100 ಮೀಟರ್‌ ವ್ಯಾಪ್ತಿಯನ್ನಷ್ಟೇ ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಲಾಗುತ್ತದೆ. ಇನ್ನು ಮುಂದೆ ಸೋಂಕಿತನ ಮನೆಯನ್ನಷ್ಟೇ ಸೀಲ್ ಡೌನ್ ಮಾಡುವ ಪ್ರಸ್ತಾಪ ಇದೆ. ಸೋಂಕಿತನ ಮನೆಗೆ ಸರ್ಕಾರವೇ ಅಗತ್ಯ ವಸ್ತುಗಳನ್ನು ಪೂರೈಸುತ್ತದೆ. ಶೀಘ್ರವೇ ಈ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳಲಿದೆ' ಎಂದು ಸುಧಾಕರ್ ಹೇಳಿದ್ದಾರೆ.