ಫೋನ್ ಕದ್ದಾಲಿಕೆ: ತನಿಖೆಯಲ್ಲಿ ‘ಮೋಡಸ್ ಆಪರಂಡಿ’ ಬಗ್ಗೆ ACP ಸ್ಫೋಟಕ ಮಾಹಿತಿ!

Nov 2, 2019, 12:58 PM IST

ಬೆಂಗಳೂರು (ಅ.02): ಮೈತ್ರಿ ಸರ್ಕಾರದ ಅವಧಿಯಲ್ಲಿ, ತಮ್ಮ ಮೊಬೈಲ್‌ನಲ್ಲೇ ವಿಶೇಷ ಸೌಲಭ್ಯ ಹೊಂದುವ ಮೂಲಕ ಕೇಂದ್ರ ಅಪರಾಧ ವಿಭಾಗದ (CCB) ACPಯೊಬ್ಬರು ಆಳುವ ವರ್ಗದ ವಿರೋಧಿಗಳ ಸಂಭಾಷಣೆಯನ್ನು ಕದ್ದಾಲಿಸಿದ್ದರು ಎಂಬ ಮಹತ್ವದ ಸಂಗತಿ CBI ತನಿಖೆಯಲ್ಲಿ ಬಹಿರಂಗವಾಗಿದೆ.

ಫೋನ್ ಟ್ಯಾಪಿಂಗ್ ಪ್ರಕರಣದಲ್ಲಿ  ACP ವಿಚಾರಣೆಯಿಂದ ಸ್ಫೋಟಕ ಮಾಹಿತಿಗಳು ಹೊರಬಿದ್ದಿವೆ. ಫೋನ್ ಕದ್ದಾಲಿಕೆ ಮಾಡಲು ಬಳಸುತ್ತಿದ್ದ ತಂತ್ರ ಮತ್ತು ತಂತ್ರಜ್ಞಾನವನ್ನು ಅವರು ಅಧಿಕಾರಿಗಳ ಮುಂದೆ ಬಾಯ್ಬಿಟ್ಟಿದ್ದಾರೆ.   

ಮೈತ್ರಿ ಸರ್ಕಾರದ ಅವಕೃಪೆಗೊಳಗಾಗಿದ್ದ ರಾಜಕಾರಣಿಗಳು, ಸ್ವಪಕ್ಷದ ಶಾಸಕರು, ಸರ್ಕಾರಿ ಅಧಿಕಾರಿಗಳು, ಉದ್ಯಮಿಗಳು, ಚಲನಚಿತ್ರ ನಟರು ಹಾಗೂ ಮಠಾಧಿಪತಿಗಳ ಸಂಭಾಷಣೆಯನ್ನು ಕದ್ದಾಲಿಸಿರುವ ಬಗ್ಗೆ CBI  ತನಿಖೆ ನಡೆಸುತ್ತಿದೆ.