Covid 19: ಸರ್ಕಾರ ರೂಪಿಸಿದ ನಿಯಮವನ್ನು ನಾವು ಪಾಲಿಸಬೇಕು: ಭಾ.ಮಾ. ಹರೀಶ್

Dec 27, 2022, 5:27 PM IST

ಕರ್ನಾಟಕದಲ್ಲಿ ಮತ್ತೆ ಕೊರೋನಾ ಭೀತಿ ಎದುರಾಗಿದ್ದು, ರಾಜ್ಯ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಈ ಕುರಿತು ಫಿಲ್ಮ ಚೇಂಬರ್‌ ಅಧ್ಯಕ್ಷ ಭಾ.ಮಾ ಹರೀಶ್‌ ಮಾತನಾಡಿ, ಸರ್ಕಾರ ರೂಪಿಸಿದ ನಿಯಮವನ್ನು ನಾವು ಪಾಲಿಸಬೇಕು ಎಂದು ತಿಳಿಸಿದ್ದಾರೆ. ಕೋವಿಡ್‌ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಥಿಯೇಟರ್‌ ಹಾಗೂ ಮಾಲ್‌ಗಳಲ್ಲಿ ಮಾಸ್ಕ್‌ ಕಡ್ಡಾಯ ಮಾಡಿದೆ. ಎಲ್ಲರೂ ಇದನ್ನು ಪಾಲಿಸಬೇಕು. ಯಾಕೆಂದರೆ ಕೊರೋನಾ ಜಾಸ್ತಿಯಾದರೆ ನಮಗೇನೆ ತೊಂದರೆಯಾಗುತ್ತದೆ. ಪ್ರತಿಯೊಬ್ಬ ಪ್ರೇಕ್ಷಕನು ಸರ್ಕಾರದ ಆದೇಶವನ್ನು ಪಾಲಿಸಬೇಕು.  ಎಲ್ಲರೂ ಒಂದು ಮತ್ತು ಎರಡನೇ ಅಲೆಯಲ್ಲಿ ತುಂಬಾ ಅನುಭವಿಸಿದ್ದೇವೆ. ಹೀಗಾಗಿ ಪ್ರೇಕ್ಷಕ ಈ ಬಾರಿ ತುಂಬಾ ಜಾಗೃತನಾಗಿ ಇರುತ್ತಾನೆ ಎಂದು ಹೇಳಿದರು.

Bengaluru Bus Fire: ಎಸ್‌ಆರ್‌ಎಸ್ ಬಸ್‌ ಡಿಪೋದಲ್ಲಿ ಬೆಂಕಿ: ಸುಟ್ಟು ...