: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ,ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ, ಅಗ್ನಿಪಥ್ ಯೋಜನೆಯ ವಿರುದ್ಧ ಪತ್ರ ಬರೆದಿದ್ದಾರೆ. ‘ಈ ಯೋಜನೆಯ ಸ್ವರೂಪದಲ್ಲಿ ತಾರತಮ್ಯವಿದ್ದು, ಹುತಾತ್ಮ ಸೈನಿಕರ ಕುಟುಂಬಗಳಿಗೆ ನೀಡಲಾಗುವ ಸೌಲಭ್ಯದಲ್ಲಿ ತಾರತಮ್ಯವಿದ್ದು, ಮಧ್ಯಪ್ರವೇಶಿಸಿ, ನ್ಯಾಯ ನೀಡಿ’ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದಾರೆ.
ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ,ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ, ಅಗ್ನಿಪಥ್ ಯೋಜನೆಯ ವಿರುದ್ಧ ಪತ್ರ ಬರೆದಿದ್ದಾರೆ. ‘ಈ ಯೋಜನೆಯ ಸ್ವರೂಪದಲ್ಲಿ ತಾರತಮ್ಯವಿದ್ದು, ಹುತಾತ್ಮ ಸೈನಿಕರ ಕುಟುಂಬಗಳಿಗೆ ನೀಡಲಾಗುವ ಸೌಲಭ್ಯದಲ್ಲಿ ತಾರತಮ್ಯವಿದ್ದು, ಮಧ್ಯಪ್ರವೇಶಿಸಿ, ನ್ಯಾಯ ನೀಡಿ’ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದಾರೆ.
ರಾಷ್ಟ್ರಪತಿಯವರಿಗೆ ಎರಡು ಪುಟಗಳ ಪತ್ರ ಬರೆದಿರುವ ರಾಹುಲ್,‘ ದೇಶಕ್ಕಾಗಿ ಪ್ರಾಣ ನೀಡುವ ಯೋಧರಿಗೆ ನ್ಯಾಯಕ್ಕಾಗಿ ಈ ಪತ್ರವನ್ನು ಬರೆಯುತ್ತಿದ್ದೇನೆ. ಸಾಮಾನ್ಯ ಸೈನಿಕರಿಗೆ ಹೋಲಿಸಿದರೆ, ಹತ್ಯೆಗೀಡಾದ ಅಗ್ನಿವೀರರ ಕುಟುಂಬಗಳಿಗೆ ನೀಡುವ ಸೌಲಭ್ಯ ಬಹಳ ಕಡಿಮೆಯಾಗಿದೆ.
ಇಂಡಿಯಾ ಕೂಟ ಗೆದ್ದರೆ ಅಗ್ನಿವೀರ ಕಸದ ಬುಟ್ಟಿಗೆ: ರಾಹುಲ್ ಗಾಂಧಿ
ನಿಮ್ಮ ತುರ್ತು ಗಮನಕ್ಕೆ ಇದು ಅರ್ಹವಾಗಿದೆ. ಈ ಅನ್ಯಾಯದ ಕಾರಣಕ್ಕಾಗಿಯೇ ಕಾಂಗ್ರೆಸ್ ಮತ್ತು ಇಂಡಿಯಾ ಮೈತ್ರಿ ಕೂಡ ಅಗ್ನಿವೀರ್ ಯೋಜನೆಯನ್ನು ವಿರೋಧಿಸಿವೆ. ಇಂಡಿಯಾ ಕೂಟ ಅಧಿಕಾರಕ್ಕೆ ಬಂದರೆ ಅದನ್ನು ರದ್ದುಗೊಳಿಸುವುದಾಗಿ ಭರವಸೆ ನೀಡಿದ್ದೇವೆ. ಈ ವಿಷಯದ ಗಂಭೀರತೆ ಅರಿತು ನೀವು ಮಧ್ಯಪ್ರವೇಶಿಸಬೇಕು. ದೇಶಕ್ಕಾಗಿ ಪ್ರಾಣ ಅರ್ಪಿಸುವ ಅಗ್ನಿವೀರ್ ಯೋಧರಿಗೆ ನ್ಯಾಯ ದೊರಕಿಸಿಕೊಡಬೇಕು’ ಎಂದು ರಾಹುಲ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.