ಮಣಿಪುರ ಹೊತ್ತಿ ಉರಿಯುತ್ತಿದ್ದಾಗ ಹೋಗಲಿಲ್ಲ. ಈಗಲಾದರೂ ಪ್ರಧಾನಿ ಅಲ್ಲಿಗೆ ಹೋಗಬೇಕು. ಅವರ ಖಾಸಗಿ ವಿಚಾರ ಹೇಗೆ ಪ್ರಚಾರ ಆಗುತ್ತೆ ? ಧ್ಯಾನ ಕುಳಿತರೂ ಏಳೆಂಟು ಕ್ಯಾಮೆರಾ ಬೇಕು. ಅವರ ತಾಯಿ ಭೇಟಿಯಾಗಲೂ ಕ್ಯಾಮೆರಾ ಜೊತೆಗಿರಬೇಕು. ಮೋದಿಯವರು ಪ್ರಧಾನ ಮಂತ್ರಿ ಅಲ್ಲ, ಪ್ರಚಾರ ಮಂತ್ರಿ ಎಂದು ವ್ಯಂಗ್ಯವಾಡಿದ ಸಚಿವ ಪ್ರಿಯಾಂಕ್ ಖರ್ಗೆ
ಕಲಬುರಗಿ(ಜೂ.02): ನಾವು ಇದ್ದದ್ದನ್ನು ಇದ್ದಂತೆ ಹೇಳಿದ್ದಕ್ಕೆ ಬಿಜೆಪಿಯವರು ಮಾನಹಾನಿ ಕೇಸ್ ಹಾಕಿದ್ದಾರೆ. ಪತ್ರಿಕೆಯಲ್ಲಿ ಬಂದ ವರದಿ ಆಧರಿಸಿ ನಾವು ಜಾಹೀರಾತು ನೀಡಿದ್ದೆವು. ಬಿಜೆಪಿಯವರು ಬಹಳ ಮನನೊಂದು ನಮ್ಮ ಮೇಲೆ ಕೇಸ್ ಹಾಕಿದ್ದಾರೆ ಎಂದು ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
40 ಪರ್ಸೆಂಟ್ ಸರ್ಕಾರ ಆಂದೋಲನಕ್ಕೆ ಸಂಬಂಧಿಸಿ ಬಿಜೆಪಿಯು ಕಾಂಗ್ರೆಸ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿತ್ತು ಈ ಕುರಿತು ನಗರದಲ್ಲಿ ಶನಿವಾರ ಸುದ್ದಿಗಾರರ ಜತೆಗೆ ಮಾತನಾಡಿ, ನಮ್ಮ ಮೇಲೆ ಹಾಕಿರುವ ಕೇಸ್ ಅನ್ನು ನಾವು ಕಾನೂನು ಮೂಲಕ ಎದುರಿಸುತ್ತೇವೆ ಎಂದರು. ಇದೇ ವೇಳೆ ಪ್ರಧಾನಿ ಮೋದಿ ವಿರುದ್ಧ ಮತ್ತೆ ಕಿಡಿಕಾರಿದ ಅವರು, ಮಣಿಪುರದಲ್ಲಿ ಪ್ರವಾಹ ಬಂದಿದೆ. ಆದರೆ ನಮ್ಮ ಪ್ರಧಾನಿ ಕನ್ಯಾಕುಮಾರಿಯಲ್ಲಿ ಧ್ಯಾನಕ್ಕೆ ಕೂತಿದ್ದಾರೆ ಎಂದು ಟೀಕಿಸಿದರು.
undefined
ವಾಲ್ಮೀಕಿ ನಿಗಮದ ಬಹುಕೋಟಿ ಹಣ ಗುಳುಂ: ಈ ಪ್ರಕರಣದಲ್ಲಿ ಯಾರನ್ನ ಬಿಡುವುದಿಲ್ಲ: ಪ್ರಿಯಾಂಕ್ ಖರ್ಗೆ
ಮಣಿಪುರ ಹೊತ್ತಿ ಉರಿಯುತ್ತಿದ್ದಾಗ ಹೋಗಲಿಲ್ಲ. ಈಗಲಾದರೂ ಪ್ರಧಾನಿ ಅಲ್ಲಿಗೆ ಹೋಗಬೇಕು. ಅವರ ಖಾಸಗಿ ವಿಚಾರ ಹೇಗೆ ಪ್ರಚಾರ ಆಗುತ್ತೆ ? ಧ್ಯಾನ ಕುಳಿತರೂ ಏಳೆಂಟು ಕ್ಯಾಮೆರಾ ಬೇಕು. ಅವರ ತಾಯಿ ಭೇಟಿಯಾಗಲೂ ಕ್ಯಾಮೆರಾ ಜೊತೆಗಿರಬೇಕು. ಮೋದಿಯವರು ಪ್ರಧಾನ ಮಂತ್ರಿ ಅಲ್ಲ, ಪ್ರಚಾರ ಮಂತ್ರಿ ಎಂದು ವ್ಯಂಗ್ಯವಾಡಿದರು.