ಇದು ನನ್ನ ಗೆಲುವಲ್ಲ, ಬಿಜೆಪಿ ಕಾರ್ಯಕರ್ತರ, ಮತದಾರರ ಗೆಲುವು: ಮಂಗಲಾ ಅಂಗಡಿ

May 3, 2021, 10:12 AM IST

ಬೆಂಗಳೂರು (ಮೇ. 03): ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ, ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ವಿರುದ್ಧ 5240 ಮತಗಳ ಅಂತರದ ಗೆಲುವನ್ನು ಸಾಧಿಸಿದ್ದಾರೆ. 

'ಇದು ನನ್ನ ಗೆಲುವಲ್ಲ. ಈ ಗೆಲುವಿಗೆ ಶ್ರಮಿಸಿದ ಬಿಜೆಪಿಯ ಎಲ್ಲಾ ಕಾರ್ಯಕರ್ತರ ಗೆಲುವಾಗಿದೆ. ಅವರಿಗೆ ತುಂಬಾ ಧನ್ಯವಾದಗಳನ್ನು ತಿಳಿಸುತ್ತೇನೆ.  ಪತಿ ಕೆಲಸ ಮಾಡಿದ ರೀತಿಯಲ್ಲೇ ಕೆಲಸ ಮಾಡುತ್ತೇನೆ' ಎಂದು ಮಂಗಲಾ ಅಂಗಡಿ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಪುತ್ರಿ ಶ್ರದ್ಧಾ ಶೆಟ್ಟರ್ ಕೂಡಾ ಮಾತನಾಡಿದ್ದಾರೆ. ತಂದೆಯ ಹಾಗೆ, ತಾಯಿಯೂ ಕ್ಷೇತ್ರದ ಕೆಲಸ ಮಾಡಲಿದ್ದಾರೆ ಎಂದಿದ್ದಾರೆ.