ಪಿರಿಯಡ್ಸ್ ನೋವು ಅಂತಾ ಇದನ್ನು ತಿಂದು ಕೋಮಾಕ್ಕೆ ಜಾರಿದ ಮಹಿಳೆ!

By Suvarna NewsFirst Published May 7, 2024, 3:22 PM IST
Highlights

ಮುಟ್ಟಿನ ಸಂದರ್ಭದಲ್ಲಿ ಮೂರು ದಿನ ಮಹಿಳೆಯರು ನಾನಾ ಸಮಸ್ಯೆ ಎದುರಿಸುತ್ತಾರೆ. ಅದ್ರಲ್ಲಿ ನೋವು ಕೂಡ ಒಂದು. ನೋವು ವಿಪರೀತವಾದಾಗ ಸಹಿಸಲಾಗದ ಕೆಲ ಮಹಿಳೆಯರು ಕಂಡ ಕಂಡ ಮಾತ್ರೆ ಸೇವಿಸ್ತಾರೆ. ಈ ಮಹಿಳೆ ಕೂಡ ಯಾವುದೋ ಮಾತ್ರೆ ತಿಂದು ಯಡವಟ್ಟು ಮಾಡಿಕೊಂಡಿದ್ದಾಳೆ. 
 

ಮುಟ್ಟಿನ ಸಮಯದಲ್ಲಿ ನೋವು ಕಾಣಿಸಿಕೊಳ್ಳೋದು ಸಾಮಾನ್ಯ. ಮುಟ್ಟಿನ ನೋವನ್ನು ಕಡಿಮೆ ಮಾಡಲು ಅನೇಕ ಮಹಿಳೆಯರು ನೋವಿನ ಔಷಧಿ ತೆಗೆದುಕೊಳ್ತಾರೆ. ಹಿಂದಿನ ವರ್ಷ ಹದಿನಾರು ವರ್ಷದ ಹುಡುಗಿಯೊಬ್ಬಳು ಪಿರಿಯಡ್ಸ್ ನೋವು ಕಡಿಮೆ ಮಾಡಲು ಗರ್ಭನಿರೋಧಕ ಮಾತ್ರೆ ಸೇವಿಸಿ ಸಾವನ್ನಪ್ಪಿದ್ದಳು. ಆಕೆ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ಆಕೆ ಸಾವನ್ನಪ್ಪಿದ್ದಳು. ಈಗ ಮತ್ತೊಂದು ಮಹಿಳೆ, ಪಿರಿಯಡ್ಸ್ ನೋವು ಕಡಿಮೆ ಮಾಡಲು ನೋವಿನ ಮಾತ್ರೆ ತೆಗೆದುಕೊಂಡು ಯಡವಟ್ಟು ಮಾಡಿಕೊಂಡಿದ್ದಾಳೆ. ಅಂತೂ ಇಂತೂ ಬದುಕಿ ಬಂದ ಮಹಿಳೆ ಜೀವನ ಸಹಜ ಸ್ಥಿತಿಗೆ ಬರ್ತಿಲ್ಲ. 

ಬ್ರೆಜಿಲ್‌ (Brazil) ನ ಜಾಕ್ವೆಲಿನ್ ಗಮ್ಯಾಕ್, ಪಿರಿಯಡ್ಸ್ (Periods) ನೋವು ತಡೆಯಲಾರದೆ ತಪ್ಪು ಮಾತ್ರೆ ಸೇವಿಸಿ ಆಸ್ಪತ್ರೆ ಸೇರಿದ ಮಹಿಳೆ. ಜಾಕ್ವೆಲಿನ್ ಗಮ್ಯಾಕ್ ಬ್ರೆಜಿಲಿಯನ್ ಪ್ರಭಾವಿ ಮತ್ತು ರೂಪದರ್ಶಿ. ಮುಟ್ಟಿನ ಸಮಯದಲ್ಲಿ ಆಕೆಗೆ ವಿಪರೀತ ನೋವಾ (Pain) ಗುತ್ತಿತ್ತು. ಅದನ್ನು ಸಹಿಸಲು ಆಕೆಗೆ ಸಾಧ್ಯವಾಗ್ತಿರಲಿಲ್ಲ. ನೋವು ಹೆಚ್ಚಾಗುತ್ತಿದ್ದಂತೆ ಜಾಕ್ವೆಲಿನ್ ಗಮ್ಯಾಕ್, ಮನೆಯಲ್ಲಿದ್ದ ನೋವಿನ ಮಾತ್ರೆ ತಿಂದಿದ್ದಾಳೆ. ಆಕೆ ಐಬುಪ್ರೊಫೆನ್ ಮಾತ್ರೆ ಸೇವನೆ ಮಾಡಿದ್ದಾಳೆ. 

WEIGHT LOSS TIPS: ಒಂದೇ ವಾರದಲ್ಲಿ ತೂಕ ಇಳಿಸಿಕೊಳ್ಳೋಕೆ ಈ ಮಸಾಲೆ ತಿನ್ನಿ

ಮಾತ್ರೆ ಸೇವನೆ ಮಾಡಿದ ತಕ್ಷಣ ಜಾಕ್ವೆಲಿನ್ ಗಮ್ಯಾಕ್ ಗೆ ಯಾವುದೇ ತೊಂದರೆ ಆಗ್ಲಿಲ್ಲ. ಆದ್ರೆ 48 ಗಂಟೆ ನಂತ್ರ ಕಣ್ಣಿನಲ್ಲಿ ತುರಿಕೆ ಕಾಣಿಸಿಕೊಂಡಿದೆ. ನಂತ್ರ ಬಾಯಲ್ಲಿ ರಕ್ತದ ಗುಳ್ಳೆ ಕಾಣಿಸಿದೆ. ಒಂದಾದ್ಮೇಲೆ ಒಂದು ಸಮಸ್ಯೆ ಕಾಣಿಸಿಕೊಳ್ತಿದ್ದಂತೆ 21 ವರ್ಷದ ಜಾಕ್ವೆಲಿನ್ ಗಮ್ಯಾಕ್ ಆಸ್ಪತ್ರೆಗೆ ಓಡಿದ್ದಾಳೆ. ಆಕೆಯ ಮುಖದ ತುಂಬಾ ಗುಳ್ಳೆಗಳಾಗಿದ್ದು, ಕಣ್ಣು ಬಿಡೋಕೆ ಸಾಧ್ಯವಾಗ್ತಿರಲಿಲ್ಲ. ಆಸ್ಪತ್ರೆಗೆ ಹೋದ ಕೆಲವೇ ಗೊತ್ತಿನಲ್ಲಿ ಜಾಕ್ವೆಲಿನ್ ಗಮ್ಯಾಕ್ ಕೋಮಾಕ್ಕೆ ಜಾರಿದ್ದಾಳೆ. 

ಹದಿನೇಳು ದಿನಗಳ ನಂತ್ರ ಜಾಕ್ವೆಲಿನ್ ಗಮ್ಯಾಕ್ ಕೋಮಾದಿಂದ ಹೊರಗೆ ಬಂದಿದ್ದಾಳೆ. ಕೋಮಾದಿಂದ ಹೊರ ಬಂದ ಜಾಕ್ವೆಲಿನ್ ಗೆ ಬ್ಯಾಂಡೇಜ್ ಕಾಣಿಸಿದೆ. ಗಂಟಲಿಗೆ ಪೈಪ್ ಹಾಕಿರೋದು ಗೊತ್ತಾಗಿದೆ. ಆಕೆಗೆ ಯಾವುದೇ ನೋವು ಇಲ್ಲದೆ ಹೋದ್ರೂ ಮುಖವನ್ನು ಕನ್ನಡಿಯಲ್ಲಿ ನೋಡಲು ಸಾಧ್ಯವಾಗ್ತಿರಲಿಲ್ಲ. ಈಗ್ಲೂ ಆಕೆಯ ಮುಖದಲ್ಲಿ ಸುಧಾರಣೆ ಕಂಡು ಬಂದಿಲ್ಲ. ಕಣ್ಣಿನ ದೃಷ್ಟ ಅಸ್ಪಷ್ಟವಾಗಿದೆ. ಶೇಕಡಾ 40ರಷ್ಟು ದೃಷ್ಟಿ ಮಾತ್ರ ಉಳಿದಿದೆ. ಕಾರ್ನಿಯಾ ಕಸಿ, ಆಮ್ನಿಯೋಟಿಕ್ ಮೆಂಬರೇನ್ ಟ್ರಾನ್ಸ್‌ಪ್ಲಾಂಟ್ ಮತ್ತು ಸ್ಟೆಮ್ ಸೆಲ್ ಟ್ರಾನ್ಸ್‌ಪ್ಲಾಂಟ್‌ಗೆ ಒಳಗಾಗಿದ್ದಾಳೆ. ಆಕೆಯನ್ನು ಪ್ರತಿ ವಾರ ಚಿಕಿತ್ಸೆಗೆ ಒಳಪಡಿಸಲಾಗ್ತಿದೆ. ನೋವು ಕಡಿಮೆ ಮಾಡಿಕೊಳ್ಳಲು ನೋವಿನ ಮಾತ್ರೆ ಸೇವನೆ ಮಾಡಿದ ಜಾಕ್ವೆಲಿನ್ ಗಮ್ಯಾಕ್ ಗೆ ಈಗ ಅದ್ರ ದುಪ್ಪಟ್ಟು ಸಮಸ್ಯೆ ಎದುರಿಸುವಂತಾಗಿದೆ. ಆಕೆ ಸಾವಿನ ತುತ್ತ ತುದಿಗೆ ಹೋಗಿ ಬಂದಿದ್ದಾಳೆ. ಬದುಕುಳಿದಿದ್ದು ಪವಾಡ ಎಂದು ಜಾಕ್ವೆಲಿನ್ ಗೆ ಚಿಕಿತ್ಸೆ ನೀಡಿದ ವೈದ್ಯರು ಹೇಳಿದ್ದಾರೆ.

ರಾತ್ರಿ ಹಾಲಿನ‌ ಜೊತೆ‌ ಕ್ಯಾಲ್ಸಿಯಂ ಪೂರಕ ಬೇಡವೇ ಬೇಡ‌

ಜಾಕ್ವೆಲಿನ್ ಗಮ್ಯಾಕ್ ಈ ಸ್ಥಿತಿಗೆ ಕಾರಣ ಏನು? : ಪಿರಿಯಡ್ಸ್ ನೋವು ಕಾಣಿಸಿಕೊಂಡಾಗ ಅನೇಕರು ನೋವಿನ ಮಾತ್ರೆ ಸೇವನೆ ಮಾಡುತ್ತಾರೆ. ಇದು ಸೂಕ್ತವಲ್ಲ. ಎಲ್ಲ ಮಹಿಳೆಯರಿಗೆ ಎಲ್ಲ ಮಾತ್ರೆ ನೋವು ಕಡಿಮೆ ಮಾಡಲು ಸಾಧ್ಯವಿಲ್ಲ. ಜಾಕ್ವೆಲಿನ್, ಸ್ಟೀವನ್ಸ್-ಜಾನ್ಸನ್ ಸಿಂಡ್ರೋಮದಿಂದ ಬಳಲುತ್ತಿದ್ದಳು. ಈ ಖಾಯಿಲೆಯಿಂದ ಬಳಲುವ ಜನರು ಎಂಟಿಬಯೋಟಿಕ್ ಮಾತ್ರೆ ತೆಗೆದುಕೊಳ್ಳುವಂತಿಲ್ಲ. ವಿಶೇಷವಾಗಿ ಉರಿಯೂತದ ಅಥವಾ ನೋವು ನಿವಾರಕ ಔಷಧಿಗಳನ್ನು ಸೇವಿಸುವುದು ಅಪಾಯಕಾರಿ. ಇದು ದೇಹದಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವ ಬದಲು ಅದ್ರ ವಿರುದ್ಧವೇ ದಾಳಿ ನಡೆಸುತ್ತದೆ. ತಕ್ಷಣ ಚಿಕಿತ್ಸೆ ಸಿಗದೆ ಹೋದಲ್ಲಿ ವ್ಯಕ್ತಿ ಸಾವನ್ನಪ್ಪುವ ಅಪಾಯವಿರುತ್ತದೆ. ಇದೊಂದು ಅಪರೂಪದ ಖಾಯಿಲೆಯಾಗಿದ್ದು, ಜಾಕ್ವೆಲಿನ್ ಗಮ್ಯಾಕ್ ಗೆ ಇದು ಕಾಣಿಸಿಕೊಂಡಿದೆ. ಸದ್ಯ ಜಾಕ್ವೆಲಿನ್ ಗಮ್ಯಾಕ್ ಸುಧಾರಿಸಿಕೊಳ್ತಿದ್ದಾಳೆ. 

click me!