Dec 5, 2020, 11:09 AM IST
ಬೆಂಗಳೂರು (ಡಿ. 05): ರಾಜ್ಯ ರಾಜಧಾನಿಯಲ್ಲಿ ಕರ್ನಾಟಕ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಯಾವ ರೀತಿ ಚಿತ್ರಣ ಇದೆ ಎಂದು ನೋಡುವುದಾದರೆ, ತಡರಾತ್ರಿಯಿಂದಲೇ ಪ್ರಯಾಣಿಕರು ಆಗಮಿಸುತ್ತಿದ್ದಾರೆ. ಇಂದು ಮಧ್ಯಾಹ್ನ ವಿಮಾನ ಹತ್ತಬೇಕಾದವರೂ, ಬೆಳಿಗ್ಗೆಯೇ ಆಗಮಿಸುತ್ತಿದ್ದಾರೆ.
ವಿಜಯಪುರದಲ್ಲಿ ವಾಟಾಳ್ VS ಯತ್ನಾಳ್ ಪ್ರತಿಷ್ಠೆ: ಕರ್ನಾಟಕ ಬಂದ್ ಯಶಸ್ವಿಯಾಗೋದು
ಅಲ್ಲಿರುವ ಪ್ರಯಾಣಿಕರನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ಮಾತನಾಡಿಸಿದಾಗ, ಓಲಾ, ಊಬರ್, ಟ್ಯಾಕ್ಸಿ ಇರುತ್ತಾ? ಇಲ್ವಾ? ಸರಿಯಾದ ಮಾಹಿತಿ ಇರಲಿಲ್ಲ. ಹಾಗಾಗಿ ಮುಂಚಿತವಾಗಿಯೇ ಬಂದು ಇಲ್ಲಿ ಕಾಯುತ್ತಿದ್ದೇವೆ.ಎಂದು ಹೇಳಿದರು.