ಕಾರವಾರ: ರಸ್ತೆಯಲ್ಲೇ ಟಾಟಾ ಇಂಡಿಕಾ ಕಾರು ಬೆಂಕಿಗಾಹುತಿ, ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು

By Girish Goudar  |  First Published May 1, 2024, 6:12 PM IST

ಕಾರು ಚಲಾಯಿಸುತ್ತಿದ್ದ ಸಮಯ ಕಾರಿನಲ್ಲಿ ಏಕಾಏಕಿ ಹೊಗೆ ಕಾಣಿಸಿಕೊಂಡಿತ್ತು. ತಕ್ಷಣ ಕಾರಿನಿಂದ ಕೆಳಗೆ ಇಳಿದು ಜೀವ ಉಳಿಸಿಕೊಂಡಿದ್ದಾರೆ ಪ್ರಯಾಣಿಕರು. ಕ್ಷಣಾರ್ಧದಲ್ಲೇ ಬೆಂಕಿ ಕಾಣಿಸಿಕೊಂಡು ಕಾರಿಗೆ ಆವರಿಸಿಕೊಂಡಿದೆ. ಬೆಂಕಿಯ ಜ್ವಾಲೆಯಿಂದ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ. 


ಕಾರವಾರ(ಮೇ.01):  ಟಾಟಾ ಇಂಡಿಕಾ ಕಾರು ರಸ್ತೆಯಲ್ಲೇ ಬೆಂಕಿಗಾಹುತಿಯಾಗಿದೆ. ಹೌದು, ಈ ಘಟನೆ ನಡೆದಿರೋದು ಉತ್ತರಕನ್ನಡ ಜಿಲ್ಲೆಯ ಹಳಿಯಾಳದ ಗುಂಡೊಳ್ಳಿಯಿಂದ ಕಾಳಗಿನಕೊಪ್ಪ ಗ್ರಾಮಕ್ಕೆ ಹೊಗುವ ಮಾರ್ಗ ಮಧ್ಯೆ ಅಜಮನಾಳ ತಾಂಡ ಕ್ರಾಸ್ ಬಳಿ.  

ಕಾರು ಚಲಾಯಿಸುತ್ತಿದ್ದ ಸಮಯ ಕಾರಿನಲ್ಲಿ ಏಕಾಏಕಿ ಹೊಗೆ ಕಾಣಿಸಿಕೊಂಡಿತ್ತು. ತಕ್ಷಣ ಕಾರಿನಿಂದ ಕೆಳಗೆ ಇಳಿದು ಜೀವ ಉಳಿಸಿಕೊಂಡಿದ್ದಾರೆ ಪ್ರಯಾಣಿಕರು. ಕ್ಷಣಾರ್ಧದಲ್ಲೇ ಬೆಂಕಿ ಕಾಣಿಸಿಕೊಂಡು ಕಾರಿಗೆ ಆವರಿಸಿಕೊಂಡಿದೆ.

Tap to resize

Latest Videos

undefined

ಅಪಘಾತವಾಗಿ ಗಂಭೀರ ಸ್ಥಿತಿಯಲ್ಲಿದ್ದವನನ್ನು ಆಸ್ಪತ್ರೆಗೆ ಕರೆದೊಯ್ದು ವೈದ್ಯೋಪಚಾರ ನೀಡಿದ ಡಾ.ಅಂಜಲಿ ನಿಂಬಾಳ್ಕರ್

ಬೆಂಕಿಯ ಜ್ವಾಲೆಯಿಂದ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದಾರೆ. ಕಾರಿನೊಳಗೆ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಶಂಕಿಸಲಾಗಿದೆ. 

click me!