Dec 1, 2020, 10:36 AM IST
ಬೆಂಗಳೂರು (ಡಿ. 01): ಐಎಂಎ ಬಹುಕೋಟಿ ಹಗರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸಿಬಿಐ ತನಿಖೆ ವೇಲೆ ಪ್ರಭಾವಿಗಳ ಹೆಸರನ್ನು ಐಎಎಸ್ ಅಧಿಕಾರಿ ಡಾ. ರಾಜ್ ಕುಮಾರ್ ಖತ್ರಿ ಬಾಯ್ಬಿಟ್ಟಿದ್ದಾರೆ.
ನ್ಯೂಸ್ ಅವರ್ : ಐಎಂಎ ಕೇಸ್‌ನಲ್ಲಿ ಜಮೀರ್, ರೊಷನ್ ಜೊತೆ ಮತ್ತೊಬ್ಬ ದೊಡ್ಡವರ ಹೆಸರು!
ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್, ನನಗೆ ಸಹಾಯ ಮಾಡುವಂತೆ ಕೇಳಿದ್ದರು. ನಿಮಗೆ ಆರ್ಥಿಕ ಲಾಭವಾಗಬಹುದು ಎಂದಿದ್ದರು. ಕಾನೂನಿನ ಪ್ರಕಾರ ಏನು ಮಾಡಬಹುದೋ, ಅದನ್ನು ಮಾಡುತ್ತೇನೆ ಎಂದಿದ್ದೆ' ಎಂದು ಐಎಎಸ್ ಅಧಿಕಾರಿ ಡಾ. ರಾಜ್ ಕುಮಾರ್ ಖತ್ರಿ ಹೇಳಿದ್ದಾರೆ. ಸದ್ಯ ಜಮೀರ್ ಅಹ್ಮದ್‌ಗೆ ಬಂಧನ ಭೀತಿ ಎದುರಾಗಿದೆ.