ಮಾಸ್ಕ್ ಡೇ ಗೃಹಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಿಷ್ಟು..

Jun 18, 2020, 6:12 PM IST

ಬೆಂಗಳೂರು(ಜೂ.18): ರಾಜ್ಯಾದ್ಯಂತ ಕೊರೋನಾ ಸೋಂಕಿನ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಕೋವಿಡ್ 19 ಸೋಂಕಿನಿಂದ ಬಚಾವಾಗಲು ಸದ್ಯ ಮಾಸ್ಕ್ ಧರಿಸುವುದಷ್ಟೇ ನಮ್ಮು ಮುಂದಿರುವ ಬಹುಮುಖ್ಯ ಆಯ್ಕೆಯಾಗಿದೆ.

ಕೊರೋನಾ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಮಾಸ್ಕ್ ಮಹತ್ವವನ್ನು ಜನತೆಗೆ ತಿಳಿಸಲು ಜೂನ್ 18ರಂದು ಮಾಸ್ಕ್ ದಿನವನ್ನಾಗಿ ಆಚರಿಸಲಾಯಿತು. ಮಾಸ್ಕ್ ಮಹತ್ವದ ಬಗ್ಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದಾರೆ.

ಬಳ್ಳಾರಿಯಲ್ಲಿ ವಿಶೇಷವಾಗಿ ಮಾಸ್ಕ್ ಡೇ ಆಚರಿಸಿದ ವೈದ್ಯಕೀಯ ವಿದ್ಯಾರ್ಥಿಗಳು

ಇಡೀ ದೇಶದಲ್ಲಿ ಅತಿಹೆಚ್ಚು ಕೊರೋನಾ ಟೆಸ್ಟ್ ಮಾಡಿದ ರಾಜ್ಯವೆಂದರೆ ಅದು ಕರ್ನಾಟಕ. ಅತಿ ಕಡಿಮೆ ಸಾವು-ನೋವು ಆಗಿರುವುದು ಕೂಡಾ ಕರ್ನಾಟಕದಲ್ಲಿಯೇ. ಕೊರೋನಾ ವಾರಿಯರ್ಸ್‌ಗಳಾದ ಪೊಲೀಸರಿಗೂ ಕೂಡಾ ಮಾಸ್ಕ್ ಹಾಗೂ ಮುನ್ನೆಚ್ಚರಿಕೆ ಕೈಗೊಳ್ಳುವುದರ ಬಗ್ಗೆ ತಿಳುವಳಿಕೆ ನೀಡಲಾಗಿದೆ ಎಂದು ಗೃಹಸಚಿವರು ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.