ಲಾಕ್‌ಡೌನ್ ನಿಯಮ ಮೀರಿ ಶಾಸಕನ ಮಗನ ಅದ್ಧೂರಿ ಮದುವೆ; FIR ದಾಖಲು ಸಾಧ್ಯತೆ

Jun 16, 2020, 12:36 PM IST

ಬೆಂಗಳೂರು (ಜೂ. 16): ಲಾಕ್‌ಡೌನ್ ನಿಯಮವನ್ನೂ ಮೀರಿ ಶಾಸಕ ಪಿ ಟಿ ಪರಮೇಶ್ವರ್ ನಾಯ್ಕ್ ಮಗನ ಅದ್ಧೂರಿ ಮದುವೆ ಮಾಡಲಾಗಿದ್ದು, ಈ ಆರೋಪದಡಿಯಲ್ಲಿ ಕೇಸ್ ದಾಖಲಾಗುವ ಸಾಧ್ಯತೆ ಇದೆ. ಪರಮೇಶ್ವರ್ ನಾಯ್ಕ್, ಪಿ ಟಿ ಭರತ್ ವಿರುದ್ಧ ಇಂದು ಎಫ್‌ಐಆರ್ ದಾಖಲಾಗುವ ಸಾಧ್ಯತೆ ಇದೆ.

ನಿನ್ನೆ ಅರಸೀಕೆರೆ ಠಾಣೆಯಲ್ಲಿ ತಹಶೀಲ್ದಾರ್ ನಾಗವೇಣಿ ದೂರು ದಾಖಲಿಸಿಕೊಂಡಿದ್ದಾರೆ. ಶಾಸಕರಿಗೆ ನೊಟೀಸ್ ಜಾರಿಗೊಳಿಸುವಂತೆ ಡಿಸಿ ಆದೇಶ ನೀಡಿದ್ದಾರೆ. ಮಗ ಭರತ್ ಮದುವೆಗೆ ತಾಲ್ಲೂಕು ಆಡಳಿತದ ಅನುಮತಿ ಪಡೆದಿದ್ದರು. ಆದರೆ ಲಾಕ್‌ಡೌನ್ ನಿಯಮ ಮೀರಿ ಮದುವೆಯಲ್ಲಿ ಸಾವಿರಾರು ಮಂದಿ ಭಾಗಿಯಾಗಿದ್ದಾರೆ.