
ಎಟಾವಾ (ಉ.ಪ್ರ.) (ಮೇ.06): 'ನಮಗೆ ಮಕ್ಕಳಿಲ್ಲ. ಆದರೆ ಮೋದಿ ಮತ್ತು ಯೋಗಿ (ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್), ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಕೆಲಸ ಮಾಡುತ್ತಿದ್ದೇವೆ' ಎಂದು ಪ್ರಧಾನಿ ನರೇಂದ್ರ ಮೋದಿ ಭಾವುಕರಾಗಿ ನುಡಿದಿದ್ದಾರೆ. ಎಸ್ಪಿ ನೇತಾರ ಮುಲಾಯಂ ಸಿಂಗ್ ಯಾದವ್ ಅವರ ತವರು, ಉತ್ತರ ಪ್ರದೇಶದ ಎಟಾವಾದಲ್ಲಿ ನಡೆದ ಬಿಜೆಪಿ ರ್ಯಾಲಿಯಲ್ಲಿ ಮಾತನಾಡಿದ ಅವರು, ಎಸ್‌ಪಿ-ಕಾಂಗ್ರೆಸ್ ಮೈತ್ರಿಯನ್ನು ಹಿಗ್ಗಾಮುಗ್ಗಾ ಟೀಕಿಸಿದರು.
'ಎರಡೂ ಪಕ್ಷಗಳು ತಮ್ಮ ಮಕ್ಕಳ ರಾಜಕೀಯ ಉಳಿವಿಗಾಗಿ ಚುನಾವಣೆ ಎದುರಿಸುತ್ತಿದ್ದರೆ, ಮೋದಿ-ಯೋಗಿ ನಿಮ್ಮ (ಮತದಾರರ) ಮಕ್ಕಳ ಏಳಿಗೆಗೆ ಚುನಾವಣೆ ಎದುರಿಸುತ್ತಿದ್ದಾರೆ. ನಾನು ಚಿಕ್ಕಂದಿನಲ್ಲಿ ಚಾಯ್‌ವಾಲಾ ಆಗಿದ್ದರೂ, ಕುಟುಂಬದವರಿಗೇ ಪ್ರಧಾನಿ ಹುದ್ದೆ ದೊರಕಬೇಕು ಎಂಬ ಸಂಕೋಲೆ ಕಳಚಿ ಉನ್ನತ ಸ್ಥಾನಕ್ಕೇರಿದ್ದೇನೆ. ಅದೇ ರೀತಿ 2047ರಲ್ಲಿ ನಿಮ್ಮ ಮಕ್ಕಳೂ ಪಿಎಂ, ಸಿಎಂ ಆಗಬೇಕು. ಇದೇ ನನ್ನ ಇಚ್ಛೆ' ಎಂದು ಜನತೆಗೆ ಕರೆ ನೀಡಿದರು.
ನಾನು ಮತ್ತೆ ಪ್ರಧಾನಿ ಎಂದಿದ್ದರು ಮುಲಾಯಂ: 'ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗಲಿದ್ದಾರೆ ಎಂದು ಸಮಾಜವಾದಿ ಪಾರ್ಟಿ ನೇತಾರ ಮುಲಾಯಂ ಸಿಂಗ್ ಯಾದವ್ 2019ರಲ್ಲೇ ತಿಳಿಸಿದ್ದರು' ಎಂದೂ ಮೋದಿ ಮೆಲುಕು ಹಾಕಿದರು. 'ಅವರ ಈ ಮಾತನ್ನು ನಾನು ಆಶೀರ್ವಾದ ಎಂದು ಭಾವಿಸುತ್ತೇನೆ. ಅದೇ ನನಗೆ ಶ್ರೀರಕ್ಷೆ' ಎಂದೂ ಮೋದಿ ಹೇಳಿದ್ದು, ತಾವು 3ನೇ ಬಾರಿ ಪ್ರಧಾನಿ ಆಗುವ ವಿಶ್ವಾಸ ವ್ಯಕ್ತಪಡಿಸಿದರು. ಈ ಮೂಲಕ ತಮ್ಮ ವಿರುದ್ಧ ತೊಡೆ ತಟ್ಟಿರುವ ಅವರ ಪುತ್ರ ಅಖಿಲೇಶ್ ಯಾದವ್‌ಗೆ ಟಾಂಗ್ ನೀಡಿದರು.
2 ಲಕ್ಷ ಮತಗಳಿಂದ ಗೆದ್ದು ಬರುವೆ: ಕೆ.ಎಸ್.ಈಶ್ವರಪ್ಪ ವಿಶ್ವಾಸದ ನುಡಿ
ಮುಸ್ಲಿಮರು ಕೇವಲ ದಾಳ: ಬಳಿಕ ಸೀತಾಪುರದಲ್ಲಿ ನಡೆದ ಮತ್ತೊಂದು ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು ಮುಸ್ಲಿಮರನ್ನು ಕಾಂಗ್ರೆಸ್ ಕೇವಲ ದಾಳವಾಗಿ ಬಳಸಿಕೊಳ್ಳುತ್ತಿದೆ. ಇದು ಆ ಸಮುದಾಯಕ್ಕೆ ಈಗ ಅರ್ಥವಾಗಿದೆ ಎಂದೂ ಮೋದಿ ನುಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ