ಕೊರೊನಾ ಕಂಟ್ರೋಲ್‌ಗೆ ಟಫ್‌ರೂಲ್ಸ್‌ ಮಾಡದೇ ಬೇರೆ ದಾರಿಯಿಲ್ಲ: ಟಾಸ್ಕ್‌ಫೋರ್ಸ್

Apr 19, 2021, 12:18 PM IST

ಬೆಂಗಳೂರು (ಏ. 19): ರಾಜ್ಯದಲ್ಲಿ ಕೊರೊನಾ ಪರಿಸ್ಥಿತಿ ಕೈ ಮೀರುತ್ತಿದೆ. ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಜಾರಿಗೊಳಿಸಲು ಸರ್ಕಾರ ಮುಂದಾಗಿದೆ. ಇಂದು ಮಧ್ಯಾಹ್ನ 3 ಗಂಟೆಗೆ ಸಿಎಂ ಮಾರ್ಗದರ್ಶನದಂತೆ ಕಂದಾಯ ಸಚಿವ ಆರ್ ಅಶೋಕ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ. ಟಫ್‌ರೂಲ್ಸ್ ಜಾರಿಯಾಗುವ ನಿರೀಕ್ಷೆ ಇದೆ. 

'2 ನೇ ಅಲೆಯನ್ನು, ಮೊದಲನೇ ಅಲೆಗೆ ಹೋಲಿಸಲು ಸಾಧ್ಯವೇ ಇಲ್ಲ. 144 ಸೆಕ್ಷನ್ ಹಾಕಿ, ಜನರನ್ನು ನಿಯಂತ್ರಿಸಿ ಎಂದು ನಾವು ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದೇವೆ. ಆದರೆ ಸರ್ಕಾರ ಜಾರಿಗೆ ತರಲು ಒಪ್ಪುತ್ತಿಲ್ಲ. ಟಫ್‌ರೂಲ್ಸ್ ಜಾರಿಗೆ ತರಲೇಬೇಕು. ಬೇರೆ ದಾರಿಯೇ ಇಲ್ಲ. ಜೀವ ಉಳಿದರೆ, ಜೀವನ ಉಳಿಸಕೊಳ್ಳಬಹುದು. ಹಾಗಾಗಿ ತಕ್ಷಣವೇ ಕ್ರಮ ಕೈಗೊಳ್ಳಿ' ಎಂದು ಟಾಸ್ಕ್‌ಫೋರ್ಸ್ ಸದಸ್ಯ ಗಿರಿಧರ್ ಬಾಬು ಹೇಳಿದ್ದಾರೆ.