ಕನಕಪುರದಲ್ಲಿ ವಾಸಿಸದ ಅಧಿಕಾರಿಗಳು ನಮಗೆ ಬೇಡ: ಡಿಕೆಶಿ ಗರಂ

Jul 24, 2022, 10:55 AM IST

ಕನಕಪುರ ಸರ್ಕಾರಿ ಅಧಿಕಾರಿಗಳ ವರ್ತನೆಗೆ ಡಿಕೆ ಶಿವಕುಮಾರ್ ಗರಂ ಆಗಿದ್ದಾರೆ. ಕೇವಲ 10 % ಅಧಿಕಾರಿಗಳು ಕನಸಕಪುರದಲ್ಲಿ ವಾಸಿಸುತ್ತಿದ್ದಾರೆ. ಜನರ ಕೈಗೆ ಯಾವ ಅಧಿಕಾರಿಯೂ ಸಿಗುತ್ತಿಲ್ಲ. ಅಂತಹ ಅಧಿಕಾರಿಗಳು ನಮಗೆ ಬೇಡ' ಎಂದು ಸಭೆಯಲ್ಲಿ  ಕ್ಲಾಸ್ ತೆಗೆದುಕೊಂಡಿದ್ದಾರೆ.

ರಾಮನಗರ ಡೀಸಿ ರಾಜೇಂದ್ರಗೆ ಕರೆ ಮಾಡಿ, ಕನಕಪುರದಲ್ಲಿ ವಾಸಿಸದ ಅಧಿಕಾರಿಗಳು ನಮಗೆ ಬೇಡ, ಎಲ್ಲಾ ಅಧಿಕಾರಿಗಳ ವಾಟ್ಸಾಪ್ ಗ್ರೂಪ್ ಮಾಡಿ, ನನ್ನನ್ನು ಸೇರಿಸಿ. ಯಾವ ಅಧಿಕಾರಿ ಎಲ್ಲಿದ್ದಾನೆ ಎಂದು ತಿಳಿಯುತ್ತದೆ.  ಟೆಕ್ನಾಲಿಜಿ ತುಂಬಾ ಸ್ಪೀಡ್ ಇದೆ, ಅದನ್ನ ಬಳಸಿಕೊಳ್ಳಿ. ಅಧಿಕಾರಿಗಳು ಜನರಿಗೆ ಲಭ್ಯವಿರಬೇಕು' ಎಂದು ತಾಕೀತು ಮಾಡಿದ್ದಾರೆ.