ಮೇ ನಲ್ಲಿ ಕೊರೊನಾ ಸೋಂಕು ಹೆಚ್ಚಳ ಸಾಧ್ಯತೆ, ನಿಯಂತ್ರಣಕ್ಕೆ ಜಾರಿಯಾಗಲಿದೆ ಟಫ್‌ರೂಲ್ಸ್.!

Apr 11, 2021, 3:42 PM IST

ಬೆಂಗಳೂರು (ಏ. 11): ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿ ಇಂದು ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಲಾಯಿತು. ಪ್ರಸ್ತುತ ಸ್ಥಿತಿಗತಿ, ಸೋಂಕು ಹರಡುವಿಕೆ ತಡೆಗಟ್ಟಲು ಅನುಸರಿಸಬೇಕಾದ ಕ್ರಮಗಳು ಮುಂತಾದ ವಿಷಯಗಳ ಕುರಿತು ಚರ್ಚಿಸಿ ತಜ್ಞರ ಅಭಿಪ್ರಾಯ ಪಡೆಯಲಾಯಿತು. 

2 ನೇ ಅಲೆ ಅಪಾಯದ ಬಗ್ಗೆ ಎಚ್ಚರಿಸಿದ ಟಾಸ್ಕ್‌ಫೋರ್ಸ್, ಮುಂಜಾಗ್ರತಾ ಕ್ರಮಕ್ಕೆ ಸುಧಾಕರ್ ಮನವಿ!

' ಯಾವುದೇ ಅಲೆ 80- 120 ದಿನ ಇರತ್ತೆ ಎಂದು ತಜ್ಞರು ಹೇಳಿದ್ದಾರೆ. ಮೇ ಕೊನೆಯವರೆಗೆ ನಾವು ಎಚ್ಚರಿಕೆಯಿಂದ ಇರಬೇಕು. ಮನೆಗಳಲ್ಲಿ ಐಸೋಲೇಟ್ ಆದವರ ಮೇಲೆ ಹೆಚ್ಚು ನಿಗಾ ಇಡುವ ವ್ಯವಸ್ಥೆ ಮಾಡುತ್ತೇವೆ' ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದ್ದಾರೆ.