ಭಜರಂಗಿ ಗರ್ಭಗುಡಿಯಲ್ಲಿ ಏಸು ಫೋಟೋ; ಮತಾಂತರಕ್ಕೆ ಕೈ ಜೋಡಿಸಿದ್ರಾ ಅರ್ಚಕ..?

Aug 11, 2020, 11:33 AM IST

ಮೈಸೂರು (ಆ. 11):  ಭಜರಂಗಿ ಗರ್ಭಗುಡಿಯಲ್ಲಿ ಏಸು ಫೋಟೋವನ್ನಿಟ್ಟು ಮತಾಂತರ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ದೇವಸ್ಥಾನದ ಅರ್ಚಕರ ವಿರುದ್ಧ ಮತಾಂತರದ ಆರೋಪ ಕೇಳಿ ಬಂದಿದೆ. ಗರ್ಭಗುಡಿಯೊಳಗೆ ಏಸು ಫೋಟೋವನ್ನಿಟ್ಟುಕೊಂಡು ಪೂಜೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಆಗಸ್ಟ್ 5 ರಂದು ರಾಮ ಮಂದಿರ ಮುಹೂರ್ತ ದಿನವೇ ಈ ಘಟನೆ ನಡೆದಿದೆ. 

ಕ್ರೈಸ್ತ  ಮಿಷನರಿಗಳ ಜೊತೆ ಅರ್ಚಕರು ಕೈ ಜೋಡಿಸಿದ್ರಾ? ಎಂಬ ಆರೋಪ ಕೇಳಿ ಬಂದಿದ್ದು, ದೇವಸ್ಥಾನದ ಪೂಜಾರಿಯನ್ನು ಓಡಿಸಬೇಕು ಎಂಬ ಅಭಿಯಾನ ಶುರುವಾಗಿದೆ. ಇಂತವರನ್ನು ಸುಮ್ಮನೆ ಬಿಡಬಾರದು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

ಕೊರೊನಾ ಹೆಸರಲ್ಲಿ ಮತಾಂತರ: ಕ್ರೈಸ್ತ ಮಿಷನರಿ ಸದಸ್ಯರಿಗೆ ಬಿಸಿ ಮುಟ್ಟಿಸಿದ ಗ್ರಾಮಸ್ಥರು