ಮ್ಯಾಜಿಸ್ಟ್ರೇಟ್ ಎದುರು ಹಾಜರ್ ; ಯುವತಿ ಹೇಳಿಕೆ ಪ್ರಕ್ರಿಯೆ ಹೇಗೆ.?

Mar 30, 2021, 4:49 PM IST

ಬೆಂಗಳೂರು (ಮಾ. 30): ತೀವ್ರ ಸಂಚಲನವನ್ನುಂಟು ಮಾಡಿದ್ದ ರಮೇಶ್ ಜಾರಕಿಹೊಳಿ ಸೀಡಿ ಪ್ರಕರಣ ಕ್ಲೈಮ್ಯಾಕ್ಸ್ ತಲುಪಿದೆ. ಸೀಡಿಯಲ್ಲಿದ್ದಾರೆ ಎನ್ನಲಾದ ಯುವತಿ ನ್ಯಾಯಾಧೀಶರ ಎದುರು ಹಾಜರಾಗಿದ್ದಾರೆ. ಅಜ್ಞಾತ ಸ್ಥಳದಲ್ಲಿ ಹೇಳಿಕೆ ನೀಡುತ್ತಿದ್ದಾರೆ. 

ಎಲ್ಲರ ಕಣ್ಣು ತಪ್ಪಿಸಿ ಜಡ್ಜ್ ಮುಂದೆ ಗೌಪ್ಯ ಸ್ಥಳದಲ್ಲೇ ಸಂತ್ರಸ್ತೆ ಸ್ಟೇಟ್‌ಮೆಂಟ್

ಈ ಪ್ರೊಸೆಸ್ ಯಾವ ರೀತಿ ನಡೆಯುತ್ತದೆ ಎಂಬುದನ್ನು ಸುಪ್ರೀಂ ಕೋರ್ಟ್ ವಕೀಲರಾದ ಸಂಕೇತ್ ಏಣಗಿ ವಿವರಿಸಿದ್ದಾರೆ. 'ಮೊದಲಿಗೆ ಮ್ಯಾಜಿಸ್ಟ್ರೇಟ್ ಪ್ರಾಥಮಿಕ ಐಡೆಂಟಿಫಿಕೇಶನ್ ಮಾಡುತ್ತಾರೆ. ಆಕೆ ಮಾನಸಿಕವಾಗಿ ಸದೃಢಳಾಗಿದ್ದಾಳೆ, ಪ್ರಭಾವಕ್ಕೆ ಒಳಗಾಗಿಲ್ಲ ಎಂದು ಖಚಿತವಾದರೆ 164 ಅಡಿ ಹೇಳಿಕೆ ದಾಖಲಿಸಿಕೊಳ್ಳುತ್ತಾರೆ. ಮುಂದಿನ ತನಿಖೆಗೆ ಯಾವ ಏಜೆನ್ಸಿಗೆ ಕೊಡಬೇಕು ಎಂದು ಕೋರ್ಟ್ ನಿರ್ಧಾರ ತೆಗೆದುಕೊಳ್ಳುತ್ತದೆ. ಬಳಿಕ ಅವರ ಸುಪರ್ದಿಗೆ ಕೊಡಲಾಗುತ್ತದೆ' ಎಂದಿದ್ದಾರೆ.