ಪ್ರಗತಿ ಜೊತೆ ರಿಷಬ್‌ ಬ್ಯೂಟಿಫುಲ್ ವೆಕೇಷನ್: ಹೋಯ್ ಶೆಟ್ರೆ ಕಾಂತಾರ ಅಪ್‌ಡೇಟ್‌ ಕೊಡಿ ಎಂದ ಫ್ಯಾನ್ಸ್!

Published : May 17, 2024, 05:13 PM IST

ನಟ ರಿಷಬ್ ಶೆಟ್ಟಿ ಅವರ ಪತ್ನಿ ಪ್ರಗತಿ ಶೆಟ್ಟಿ ಅವರು ಪತಿಯೊಂದಿಗೆ ಹೋದ ವೆಕೇಷನ್ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿವೆ.

PREV
17
ಪ್ರಗತಿ ಜೊತೆ ರಿಷಬ್‌ ಬ್ಯೂಟಿಫುಲ್ ವೆಕೇಷನ್: ಹೋಯ್ ಶೆಟ್ರೆ ಕಾಂತಾರ ಅಪ್‌ಡೇಟ್‌ ಕೊಡಿ ಎಂದ ಫ್ಯಾನ್ಸ್!

ಕಾಂತಾರ ಸಿನಿಮಾ ಬಿಡುಗಡೆಯಾದ ಬಳಿಕ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ ನಟ ರಿಷಬ್‌ ಶೆಟ್ಟಿ. ಅದರಲ್ಲೂ ಪ್ರೀಕ್ವೆಲ್‌ ಘೋಷಣೆ ಆದ ಬಳಿಕವಂತೂ ಆ ಕೆಲಸಗಳಲ್ಲಿಯೇ ಹೆಚ್ಚು ತೊಡಗಿಸಿಕೊಂಡಿದ್ದಾರೆ. 

27

ಆಗಾಗ ಪ್ರವಾಸ ಅಂತ ಪತ್ನಿ ಜತೆ ಅಲ್ಲಿ ಇಲ್ಲಿ ಸುತ್ತಾಡುತ್ತಿದ್ದ ರಿಷಬ್‌, ಸದ್ಯಕ್ಕೆ ವೆಕೇಷನ್‌ನಿಂದ ದೂರವೇ ಉಳಿದಿದ್ದಾರೆ. ಅದನ್ನು ನೆನಪಿಸುವ ಸಲುವಾಗಿ ಈ ಹಿಂದಿನ ಪ್ರವಾಸದ ಫೋಟೋ ಶೇರ್‌ ಮಾಡಿದ್ದಾರೆ ಪ್ರಗತಿ.

37

ಹಡಗಿನಲ್ಲಿ ರಿಷಬ್ ಶೆಟ್ಟಿ ದಂಪತಿ ಕಡಲಿನ ಮಧ್ಯೆ ಇರುವುದನ್ನು ಫೋಟೋದಲ್ಲಿ ಕಾಣಬಹುದು. ಇದು ಹೊಸ ಫೋಟೋ ಅಲ್ಲ. ಪ್ರಗತಿ ಶೆಟ್ಟಿ ಅವರೇ ಇದು ಹಳೆಯ ಫೋಟೋ ಎಂದು ತಿಳಿಸುವ ಥ್ರೋಬ್ಯಾಕ್ ಹ್ಯಾಶ್ ಟ್ಯಾಗ್​ ಹಾಕಿದ್ದಾರೆ. 

47

ರಿಷಬ್ ಶೆಟ್ಟಿ ಅವರ ಪತ್ನಿ ವೈಟ್ ಟಾಪ್ ಧರಿಸಿದ್ದರು. ರಿಷಬ್ ಶೆಟ್ಟಿ ಅವರು ಗಾಗಲ್ಸ್ ಧರಿಸಿಕೊಂಡು ಕ್ಲಾಸ್ ಆಗಿ ಪೋಸ್ ಕೊಟ್ಟಿದ್ದಾರೆ. ಅವರ ಈ ಕಪಲ್ ಫೋಟೋಸ್​​ಗೆ 88 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ರಿಷಬ್ ಶೆಟ್ಟಿ ಅವರು ಆಕಾಶ ನೀಲಿ ಬಣ್ಣದ ಒಂದು ಹೂಡಿ ಧರಿಸಿಕೊಂಡಿದ್ದರು. 

57

ಸರಿಯಾದ ಮಾರ್ಗದಲ್ಲಿಯೇ ಕಳೆದು ಹೋಗಿದ್ದೇವೆ ಎಂದು ಶೇರ್‌ ಮಾಡಿರುವ ಫೋಟೋಗಳಿಗೆ ಕ್ಯಾಪ್ಷನ್‌ ನೀಡಿದ್ದಾರೆ ಪ್ರಗತಿ ಶೆಟ್ಟಿ. ಹೀಗೆ ಫೋಟೋ ಶೇರ್‌ ಮಾಡುತ್ತಿದ್ದಂತೆ, ನೆಟ್ಟಿಗರು ಹೋಯ್ ಕಾಂತರ-೧ (ಪಾರ್ಟ್ 2) ಯಾವತ್ ಬತ್ ಎಂದು ರಿಷಬ್‌ ಶೆಟ್ಟಿಗೆ ಪ್ರಶ್ನೆ ಮಾಡುತ್ತಿದ್ದಾರೆ. 

67

ಇನ್ನು ಪ್ರಗತಿ ಶೆಟ್ಟಿ ಮೊದಲು ರಿಷಬ್ ಶೆಟ್ಟಿಯವರ ಅಭಿಮಾನಿ. ಥಿಯೇಟರ್ ಬಳಿ ಸೆಲ್ಫಿ ತೆಗೆದುಕೊಂಡ ಜೋಡಿ, ನಿಜ ಜೀವನದಲ್ಲಿ ಸತಿ ಪತಿಯಾಗಿ ಸಂಸಾರ ಸಾಗಿಸುತ್ತಿದ್ದಾರೆ. ಇಬ್ಬರದ್ದು ಪರ್ಫೆಕ್ಟ್ ಜೋಡಿ ಎಂದು ಎಲ್ಲರೂ ಹೇಳಿದ್ದಾರೆ.

77

ರಿಷಬ್ ಶೆಟ್ಟಿ ಅವರಿಗೆ ಪ್ರಗತಿ ಶೆಟ್ಟಿ ಸದಾ ಬೆಂಬಲವಾಗಿ ನಿಂತಿದ್ದಾರೆ. ಅವರ ನೋವು-ನಲಿವಿನಲ್ಲಿ ಜೊತೆಗಿದ್ದಾರೆ. ಎಲ್ಲಾ ಕೆಲಸಕ್ಕೂ ಬೆಂಬಲವಾಗಿ ನಿಲ್ತಾರೆ. ಕಾಂತಾರದಲ್ಲೂ ನಟಿಸಿದ್ದಾರೆ. ರಾಣಿ ಪಾತ್ರ ಮಾಡಿದ್ದಾರೆ.

Read more Photos on
click me!

Recommended Stories