ಓಪನ್ ಮಾರ್ಕೆಟ್‌ನಲ್ಲಿ ರೆಮ್ಡಿಸಿವಿರ್ ಸೇಲ್, ಕಡಿವಾಣ ಹಾಕೋರ್ಯಾರು.?

May 3, 2021, 12:05 PM IST

ಬೆಂಗಳೂರು (ಮೇ. 03): ಒಂದು ಕಡೆ ಕೊರೊನಾ ಸೋಂಕಿತರಿಗೆ ರೆಮ್ಡಿಸಿವಿರ್ ಸಿಗುತ್ತಿಲ್ಲ. ಇನ್ನೊಂದು ಕಡೆ ಓಪನ್ ಮಾರ್ಕೆಟ್‌ನಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆ ರೆಮ್ಡಿಸಿವಿರ್ ಅಕ್ರಮ ಮಾರಾಟ. ಇದಕ್ಕೆ ಕಡಿವಾಣ ಹಾಕುವವರಾರು ಎಂಬ ಪ್ರಶ್ನೆ ಎದ್ದಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಬಳಿ ದಾಖಲೆ ಸಮೇತ ಮಾಹಿತಿ ಇದೆ.

ವೆಂಟಿಲೇಟರ್‌ನಲ್ಲಿದ್ದ ಸೋಂಕಿತೆಗೆ ಒತ್ತಾಯಪೂರ್ವಕವಾಗಿ ಗೋಮೂತ್ರ ಕುಡಿಸಿದ ರಾಜಕಾರಣಿ!

ಸರ್ಕಾರಿ ಆಸ್ಪತ್ರೆಗಳಿಗಿಂತ ಓಪನ್ ಮಾರ್ಕೆಟ್‌ಗೆ ಹೆಚ್ಚು ಪೂರೈಕೆಯಾಗುತ್ತಿದೆ. ಹಾಗಾಗಿಯೇ ಆಸ್ಪತ್ರೆಗಳಲ್ಲಿ ಕೊರತೆ ಉಂಟಾಗಿದೆ. ಏಪ್ರಿಲ್ 21 ರಿಂದ 28 ರವರೆಗೆ ಸರ್ಕಾರಕ್ಕೆ 41,041 ಡೋಸ್ ಪೂರೈಕೆಯಾದರೆ ಇದೇ ಅವಧಿಯಲ್ಲಿ ಓಪನ್ ಮಾರ್ಕೆಟ್‌ಗೆ 59, 207 ಡೋಸ್ ಪೂರೈಕೆಯಾಗಿದೆ. ಈ ಬಗ್ಗೆ ಹೆಚ್ಚಿನ ಡಿಟೇಲ್ಸ್ ಇಲ್ಲಿದೆ.