ಬಿಗ್‌ 3 ಬಂದ್ಮೇಲೆ ಸಮಸ್ಯೆಗೆ ಜಾಗವೇ ಇಲ್ಲ, ಉತ್ತರ ಸಿಗೋವರ್ಗೂ ಬಿಡೋದಿಲ್ಲ..!

Dec 1, 2020, 3:17 PM IST

ಬೆಂಗಳೂರು (ಡಿ. 01): ದಾವಣಗೆರೆಯಲ್ಲಿ ರೈತನ ಮನೆಗೆ ಸಿಡಿಲು ಬಡಿಯುತ್ತೆ. ಆ ರೈತ ಮನೆಯನ್ನು ಕಳೆದುಕೊಂಡು, ಸಹಾಯಕ್ಕಾಗಿ ಬೊಬ್ಬಿಡುತ್ತಾನೆ. ಸಹಾಯಕ್ಕೆ ಯಾರೂ ಧಾವಿಸಲಿಲ್ಲ. ಆಗ ನೆರವಿಗೆ ಧಾವಿಸಿದ್ದು ಬಿಗ್‌ 3. ಆ ರೈತನ ಕಣ್ಣೀರಿನ ಕತೆಯನ್ನು ಬಿಗ್ 3 ಪ್ರಸಾರ ಮಾಡಿ, ನೆರವು ಯಾಚಿಸಿತು. ದಾನಿಗಳಿಮದ ಆರ್ಥಿಕ ನೆರವು ಹರಿದು ಬಂತು. 

ಇದು ಹೆಸರಿಗೆ ಮಾತ್ರ ಆಸ್ಪತ್ರೆ, ಕಾಲಿಟ್ಟಲ್ಲೆಲ್ಲಾ ಅವ್ಯವಸ್ಥೆ; ರೋಗಿಗಳ ಪಾಡು ಕೇಳಲೇಬೇಡಿ..!

ಇನ್ನೊಂದು ಸುದ್ದಿಯನ್ನು ನೋಡುವುದಾದರೆ, ಸಾವಿರಾರು ರೂ ಹಣ ಕೊಟ್ಟು ರೈತ ಕೃಷಿ ಬೀಜ ತಂದಿದ್ದಾನೆ. ಮಾರಾಟಗಾರ ಕಳಪೆ ಬೀಜ ಕೊಟ್ಟು ರೈತನಿಗೆ ಮೋಸ ಮಾಡಿದ್ದಾನೆ. ಏನಪ್ಪಾ ಮಾಡೋದು ಅಂತ ಆ ರೈತ ಕಂಗಾಲಾಗಿದ್ದ. ಬಿಗ್ 3 ವರದಿ ಬಳಿಕ ಕಡೆಗೂ ರೈತನಿಗೆ ನ್ಯಾಯ ಸಿಕ್ಕಿದೆ. 

ಇಲ್ಲೊಂದು ಕಡೆ ಅಪ್ಪ-ಅಮ್ಮ ಸತ್ತರೂ ಹೊತ್ತುಕೊಂಡು ಊರಿನವರು ಜಾಗ ಬಿಡುತ್ತಿರಲಿಲ್ಲ. ಬಿಗ್ 3 ವರದಿ ಬಳಿಕ ಸ್ಥಳಕ್ಕೆ ಡಿಸಿ ಆಗಮಿಸಿ ಸಮಸ್ಯೆ ಬಗೆಹರಿಸಿದ್ದಾರೆ.