BIG 3 Heroes: ಇಳಿವಯಸ್ಸಿನಲ್ಲೂ ಸ್ವಾವಲಂಬಿ ಬದುಕು ಕಟ್ಟಕೊಂಡ ಗಟ್ಟಿಗಿತ್ತಿ ಈರಮ್ಮಜ್ಜಿ..!

Jul 16, 2022, 2:52 PM IST

ನಮ್ಮ ನಡುವೆ ಅದೆಷ್ಟೂ ಸಾಧಕರಿದ್ದಾರೆ, ಸದ್ದಿಲ್ಲದೇ ಸಮಾಜಮುಖಿ ಕೆಲಸ ಮಾಡುತ್ತಿದ್ದಾರೆ. ಅವರ ಸಾಧನೆಗಳನ್ನು ನೋಡಿದಾಗ ಹೆಮ್ಮೆ ಎನಿಸುತ್ತದೆ. ಇಂದಿನ ಬಿಗ್‌ 3 ಹೀರೋದಲ್ಲಿ ಕಾರವಾರದ ರೈತ ವೃದ್ಧೆ ಈರಮ್ಮ ಕನ್ಯಾ ನಾಯಕ್ ಬಗ್ಗೆ ನೋಡೋಣ. ತಮ್ಮ ಇಳಿ ವಯಸ್ಸಿನಲ್ಲೂ ಮುಂಜಾನೆ ಎದ್ದು ಗದ್ದೆ ಕೆಲಸಕ್ಕೆ ಇಳಿಯುವ ಗಟ್ಟಿಗಿತ್ತಿ. ಕಳೆದ 50 ವರ್ಷಗಳಿಂದ ಗದ್ದೆ ಕೆಲಸ ಮಾಡುತ್ತಿರುವ ಈರಮ್ಮ, ಇಂದಿಗೂ ಸ್ವಾವಲಂಬಿಯಾಗಿ ಬದುಕುತ್ತಿದ್ದಾರೆ.