ಕೊರೊನಾ ಹಾಟ್‌ಸ್ಪಾಟ್ ಆಗುತ್ತಿದೆಯಾ ಬೆಂಗಳೂರು..?

Mar 16, 2021, 12:01 PM IST

ಬೆಂಗಳೂರು (ಮಾ. 16): ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಸತತ 3 ನೇ ದಿನವೂ 900 ಕ್ಕೂ ಹೆಚ್ಚು ಕೊರೊನಾ ಸೋಂಕು ಪತ್ತೆಯಾಗಿದೆ. 7 ಮಂದಿ ಮೃತಪಟ್ಟಿದ್ದಾರೆ. ಕಳೆದ 6 ದಿನಗಳಿಂದ ಶೇ. 1 ಕ್ಕಿಂತ ಮೇಲೆಯೇ ರಾಜ್ಯದ ಪಾಸಿಟಿವಿಟಿ ದರವಿದೆ. ಈ ಅಂಕಿ ಅಂಶಗಳು ಇನ್ನಷ್ಟು ಆಘಾತವನ್ನುಂಟು ಮಾಡುವಂತಿದೆ. ಕೊರೊನಾ ಅಂಕಿ - ಅಂಶಗಳ ರಿಪೋರ್ಟ್ ಇಲ್ಲಿದೆ.