ವೇತನವಿಲ್ಲದೇ ಬೀದಿಗೆ ಬಂದ ಸ್ಕೂಲ್ ಬಸ್ ಚಾಲಕರು..!

May 26, 2020, 6:16 PM IST

ಬೆಂಗಳೂರು(ಮೇ.26): ಕೊರೋನಾ ಲಾಕ್‌ಡೌನ್‌ನಿಂದಾಗಿ ಬೀದಿಗೆ ಬಂದಿದ್ದಾರೆ ಖಾಸಗಿ ಶಾಲಾ ಬಸ್ ಚಾಲಕರು. ಸಂಬಳವಿಲ್ಲದೇ ಡ್ರೈವರ್‌ಗಳ ಕುಟುಂಬ ಪರದಾಡುವಂತ ಪರಿಸ್ಥಿತಿ ಎದುರಾಗಿದೆ.

ಕಳೆದ ಎರಡು ತಿಂಗಳಿನಿಂದ ಕೋಣನಕುಂಟೆಯ ಡೆಲ್ಲಿ ಪಬ್ಲಿಕ್ ಸ್ಕೂಲ್‌ನವರು ಡ್ರೈವರ್‌ಗಳಿಗೆ ವೇತನ ಪಾವತಿಸಿಲ್ಲ. ಹೀಗಾಗಿ ಡ್ರೈವರ್‌ಗಳ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ.

ಮೇ 31ರ ಬಳಿಕ ರಾಜ್ಯದಲ್ಲಿ ಹೋಟೆಲ್‌ಗಳು ಓಪನ್..?

ವೇತನ ನೀಡದ ಶಾಲಾ ಆಡಳಿತ ಮಂಡಳಿಯ ವಿರುದ್ಧ ಪ್ರತಿಭಟನೆಗೆ ಬಸ್ ಚಾಲಕರು ಮುಂದಾಗಿದ್ದಾರೆ. ಶಾಲಾ ಬಸ್ ನಿಲ್ಲಿಸಿ ಚಾಲಕರು ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.