ಕೊರೊನಾ ನಿರ್ವಹಣೆಯಲ್ಲಿ ಮುಂಬೈ, ದಿಲ್ಲಿಗಿಂತ ಬೆಂಗಳೂರೇ ಬೆಸ್ಟ್‌..!

Jun 14, 2020, 11:28 AM IST

ಬೆಂಗಳೂರು (ಜೂ. 14): ದೆಹಲಿ, ಚೆನ್ನೈ ಹಾಗೂ ಮುಂಬೈ ಮಹಾನಗರಗಳಿಗೆ ಹೋಲಿಸಿದರೆ ಮಾರಕ ಕೊರೋನಾ ನಿಯಂತ್ರಣದಲ್ಲಿ ಕರ್ನಾಟಕದ ರಾಜಧಾನಿ ಬೆಂಗಳೂರು ಅತ್ಯುತ್ತಮ ಸಾಧನೆ ಮಾಡಿದೆ ಎಂದು ಸ್ವತಃ ನೀತಿ ಆಯೋಗವೇ ಪ್ರಶಂಸೆ ವ್ಯಕ್ತಪಡಿಸಿದೆ.

ದೇಶದಲ್ಲಿ ಕೊರೋನಾ ಹರಡುವಿಕೆಯ ಅಸಲಿ ಕಾರಣ ಬಹಿರಂಗ!

ಬೆಂಗಳೂರಿನಲ್ಲಿ ಕೊರೋನಾದಿಂದ ಈವರೆಗೆ ಕೇವಲ 23 ಮಂದಿ ಸಾವಿಗೀಡಾಗಿದ್ದಾರೆ. ಆದರೆ ಅದೇ ಮುಂಬೈನಲ್ಲಿ 1954, ದೆಹಲಿಯಲ್ಲಿ 1065, ಚೆನ್ನೈನಲ್ಲಿ 276 ಜನ ಮೃತರಾಗಿದ್ದಾರೆ. ಪ್ರತಿ 10 ಲಕ್ಷ ಜನರ ಪೈಕಿ ಬೆಂಗಳೂರಿನಲ್ಲಿ ಕೇವಲ 1.9 ಮಂದಿ ಸಾವಿಗೀಡಾಗುತ್ತಿದ್ದಾರೆ. ಆದರೆ ಮುಂಬೈನಲ್ಲಿ 95.7, ದೆಹಲಿಯಲ್ಲಿ 35.8 ಹಾಗೂ ಚೆನ್ನೈನಲ್ಲಿ 25.2 ಮಂದಿ ಮರಣ ಹೊಂದುತ್ತಿದ್ದಾರೆ ಎಂದು ವಿವರಿಸಿದ್ದಾರೆ.