ಹಾಸನ ರಾಸಲೀಲೆ ಪ್ರಕರಣ: ಕಿಡ್ನಾಪ್‌ ಆಗಿದ್ದ ಸಂತ್ರಸ್ಥೆ ರೇವಣ್ಣ ಆಪ್ತನ ಹುಣಸೂರು ತೋಟದ ಮನೆಯಲ್ಲಿ ಪತ್ತೆ

By Suvarna NewsFirst Published May 4, 2024, 5:08 PM IST
Highlights

ಪ್ರಜ್ವಲ್ ರೇವಣ್ಣ  ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದ ಮೂರನೇ ಪ್ರಕರಣದಲ್ಲಿ ಮೈಸೂರಿನ ಕೆಆರ್.ನಗರದಲ್ಲಿ ಕಿಡ್ನಾಪ್ ಆಗಿದ್ದ ಸಂತ್ರಸ್ತೆ ರಕ್ಷಣೆ ಮಾಡಲಾಗಿದೆ.

ಮೈಸೂರು (ಮೇ.4): ಪ್ರಜ್ವಲ್ ರೇವಣ್ಣ  ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದ ಮೂರನೇ ಪ್ರಕರಣದಲ್ಲಿ ಮೈಸೂರಿನ ಕೆಆರ್.ನಗರದಲ್ಲಿ ಕಿಡ್ನಾಪ್ ಆಗಿದ್ದ ಸಂತ್ರಸ್ತೆಯನ್ನು ರಕ್ಷಣೆ ಮಾಡಲಾಗಿದೆ. ಏಪ್ರಿಲ್‌ 29ರಂದು ಕಾಣೆಯಾಗಿದ್ದ ಮಹಿಳೆಯನ್ನು ಹುಣಸೂರು ತಾಲೂಕಿನ ಕಾಳೇನಹಳ್ಳಿಯಲ್ಲಿ ರಕ್ಷಣೆ ಮಾಡಲಾಗಿದ್ದು, ರೇವಣ್ಣ ಆಪ್ತ ಸಹಾಯಕ ರಾಜಗೋಪಾಲ್ ತೋಟದ ಮನೆಯಿಂದ ರಕ್ಷಣೆ ಮಾಡಿ ಎಸ್‌ಐಟಿ ಪೊಲೀಸರು ಕರೆದೊಯ್ದಿದ್ದಾರೆ.

ಏಪ್ರಿಲ್ 29 ರಂದು ಸಂತ್ರಸ್ತೆ ಮನೆಯಿಂದ ಕರೆದೊಯ್ಯಲಾಗಿತ್ತು. ಭವಾನಿ ರೇವಣ್ಣ ಸಂಬಂಧಿ ಸತೀಶ್ ಬಾಬು ಎಂಬಾತ ಕರೆದೊಯ್ದಿದ್ದ. ಆಗಿಂದಲೂ ಹುಣಸೂರು ತಾಲೂಕಿನ ಕಾಳೇನಳ್ಳಿಯಲ್ಲಿ ಇರುವ ರೇವಣ್ಣ ಅವರ ಆಪ್ತ ಸಹಾಯಕ  ರಾಜಗೋಪಾಲ್ ತೋಟದ ಮನೆಯಲ್ಲಿ ಇರಿಸಲಾಗಿತ್ತು. ಸಂತ್ರಸ್ತೆ ಮಗ ಕೆಆರ್.ನಗರ ಠಾಣೆಯಲ್ಲಿ ಅಪಹರಣ ದೂರು ದಾಖಲಿಸಿದ್ದ. ಕೆ.ಆರ್.ನಗರ ತಾಲೂಕಿನಲ್ಲಿ ಸಂತ್ರಸ್ಥೆಯನ್ನು ಆಕೆಯ ಮನೆಯಿಂದ ಭವಾನಿ ರೇವಣ್ಣ ಸಂಬಂಧಿ  ಸತೀಶ್ ಬಾಬು ಬಂದು ಬೈಕಿನಲ್ಲಿ ಕರೆದುಕೊಂಡು ಹೋಗಿದ್ದಾರೆ ಎಂದು ಪುತ್ರ ದೂರಿನಲ್ಲಿ ಉಲ್ಲೇಖಿಸಿದ್ದನು. ಈ ಸಂಬಂಧ ನಿನ್ನೆ ಸತೀಶ್ ಬಾಬುವನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಪ್ರಕರಣ ಮುಚ್ಚಿ ಹಾಕಲು ಮಹಿಳೆಯ ಕಿಡ್ನಾಪ್‌ ಮಾಡಿಸಿದ್ರಾ HD ರೇವಣ್ಣ? ಸಂತ್ರಸ್ಥೆ ಮಗನ ದೂರಿನನ್ವಯ ಓರ್ವ ವಶಕ್ಕೆ!

ಸಂತ್ರಸ್ಥೆಯ ಪುತ್ರ ಈ ಸಂಬಂಧ ದಾಖಲಿಸಿದ್ದ ದೂರಿನಲ್ಲಿ, ತಾಯಿಯೂ ಲೈಂಗಿಕ ದೌರ್ಜನ್ಯಕ್ಕೆ ಒಳಪಟ್ಟಿದ್ದರು. ಪೆನ್ ಡ್ರೈವ್ ವಿವಾದದಲ್ಲಿ ತನ್ನ ತಾಯಿಯ ಚಿತ್ರವೂ ಇದೆ. ವಿಡಿಯೋ ಬಹಿರಂಗ ಬಳಿಕ ಸತೀಶ್ ಬಾಬು ಹಾಗೂ ರೇವಣ್ಣ ತಾಯಿಯನ್ನು ಕರೆಯುತ್ತಿದ್ದರು. ಬಳಿಕ ತಾಯಿಯನ್ನು ಅವರು ಕರೆದೊಯ್ದರು. ಆಗಿನಿಂದ ನಾಪತ್ತೆಯಾಗಿದ್ದಾರೆ ಎಂದು ಸಂತ್ರಸ್ಥೆ ಪುತ್ರ ದೂರಿನಲ್ಲಿ ಉಲ್ಲೇಖಿಸಿದ್ದ. ಹೀಗಾಗಿ ನಿನ್ನೆಯಿಂದ ನಾಪತ್ತೆಯಾದ ಮಹಿಳೆಗಾಗಿ ತೀವ್ರ ಹುಟುಕಾಟ ನಡೆಸಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಈ ಪ್ರಕರಣದಲ್ಲಿ ಮಹಿಳೆಯನ್ನು ಹುಡುಕುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದರು.

ಸಂತ್ರಸ್ಥೆ ಪುತ್ರನ ದೂರಿನಡಿ ಕೆ.ಆರ್.ನಗರ ಠಾಣೆಯಲ್ಲಿ  ಸೆಕ್ಷನ್ 364(A) ,365, ಹಾಗು 34 ಅಡಿ ಪ್ರಕರಣ ದಾಖಲಾಗಿದ್ದು, ರೇವಣ್ಣ A1 ಆರೋಪಿ ಮತ್ತು ಸತೀಶ್ ಬಾಬು ಪ್ರಕರಣದ A2 ಆರೋಪಿಯಾಗಿದ್ದಾರೆ. ಸಂತ್ರಸ್ಥೆ ಚೆನ್ನಾಂಬಿಕಾ ಥಿಯೇಟರ್ ಪಕ್ಕದಲ್ಲಿರುವ ರೇವಣ್ಣ ಮನೆಯಲ್ಲಿ ಸುಮಾರು 6 ವರ್ಷಗಳ ಕಾಲ ಕೆಲಸ ಮಾಡಿದ್ದರು. ಸುಮಾರು 03 ವರ್ಷಗಳ ಹಿಂದೆ ಹೆಚ್.ಡಿ, ರೇವಣ್ಣ ರವರ ಮನೆಯಿಂದ ಕೆಲಸವನ್ನು ಬಿಟ್ಟು ಕೆಆರ್‌ ನಗರದಲ್ಲಿ ನೆಲೆಸಿ ಕೂಲಿ ಕೆಲಸ ಮಾಡಿಕೊಂಡಿದ್ದರು.

ಲೈಂಗಿಕ ದೌರ್ಜನ್ಯ ಪ್ರಕರಣ, ಇಬ್ಬರು ಸಂತ್ರಸ್ಥೆಯರ ಜೊತೆ ರೇವಣ್ಣ ನಿವಾಸ ಪರಿಶೀಲನೆಗೆ ಬಂದ ಎಸ್‌ಐಟಿ ತಂಡ

ಏಪ್ರಿಲ್ 29 ರಾತ್ರಿ   9 ಗಂಟೆಗೆ ಸತೀಶ್ ಬಂದು ತಾಯಿಯನ್ನು ಕರೆದೊಯ್ದಿದ್ದಾರೆ. ರೇವಣ್ಣ ಸಾಹೇಬರು ಕರೆದುಕೊಂಡು ಬರಲು ಹೇಳಿದ್ದಾರೆ ಎಂದು ಒತ್ತಾಯ ಮಾಡಿ ತಾಯಿಯನ್ನು ಸತೀಶ್ ಕರೆದುಕೊಂಡು ಹೋಗಿದ್ದಾರೆ. ಹಿರೋಹೊಂಡ ಸ್ಪೈಂಡರ್ ಬೈಕ್ ನಲ್ಲಿ ಕರೆದೊಯ್ದರು. ನನ್ನ ತಾಯಿಯನ್ನ ಎಲ್ಲಿಗೆ ಕರೆದೊಯ್ದರು ಗೊತ್ತಿಲ್ಲ. ಮೇ. 1 ರಂದು ಗೆಳೆಯರ ಮೂಲಕ ಅಶ್ಲೀಲ ವಿಡಿಯೋ ಬಂತು. ನಿನ್ನ ಅಮ್ಮನ ಕಾಲು ಕಟ್ಟಿದ್ದರು, ಪ್ರಜ್ವಲ್ ಬಲತ್ಕಾರ ಮಾಡಿದ್ದಾರೆ ಎಂದು ಗೆಳೆಯರು ತಿಳಿಸಿದ್ರು. ಈ ಸಂಬಂಧ ದೊಡ್ಡ ಕೇಸ್ ಆಗಿದೆ ಎಂದು ಗೆಳೆಯರೇ ಮಾಹಿತಿ ನೀಡಿದ್ರು‌. ಆ ಸಂದರ್ಭದಲ್ಲಿ ನನ್ನ ತಾಯಿಯನ್ನು ವಾಪಸ್ ಕರೆತರಲು ಸತೀಶ್ ಗೆ ಹೇಳಿದೆ. ಹಲ್ಲೆ ಪ್ರಕರಣದಲ್ಲಿ ನಿಮ್ಮ ತಾಯಿ ಆರೋಪಿ ಅಂತಾ ಸುಳ್ಳು ಹೇಳಿದ್ರು‌. ನನ್ನ ತಾಯಿಯನ್ನ ಒತ್ತಾಯಪೂರ್ವಕವಾಗಿ ಕೂಡಿಹಾಕಿದ್ದಾರೆ ಎಂದು ಸಂತ್ರಸ್ತೆ ಪುತ್ರ ದೂರಿನಲ್ಲಿ ಅಳಲು ತೋಡಿಕೊಂಡಿದ್ದ.

click me!