Night Curfew: ರಾತ್ರಿ 10 ರ ನಂತರ ಓಡಾಡಿದ್ರೆ FIR: ಕಮಿಷನರ್ ಪಂತ್

Dec 28, 2021, 4:26 PM IST

ಬೆಂಗಳೂರು (ಡಿ. 28): ಒಮಿಕ್ರೋನ್‌ ಭೀತಿ (Omicron Threat) ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿಧಿಸಿರುವ ರಾತ್ರಿ ಕರ್ಫ್ಯೂ (Night Curfew) ಇಂದು ರಾತ್ರಿ 10  ಗಂಟೆಯಿಂದ ಜಾರಿಯಾಗಲಿದ್ದು, ಮುಂದಿನ ಹತ್ತು ದಿನಗಳ ಕಾಲ ಪ್ರತಿ ದಿನ ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆವರೆಗೆ ವಾಣಿಜ್ಯ ಚಟುವಟಿಕೆ ಹಾಗೂ ಅನಗತ್ಯ ಸಂಚಾರಕ್ಕೆ ನಿರ್ಬಂಧ ಇರಲಿದೆ. ಜತೆಗೆ ಸಭೆ, ಸಮಾರಂಭ, ಸಮಾವೇಶ, ಮದುವೆ ಕಾರ್ಯಕ್ರಮಗಳಲ್ಲಿ 300 ಮಂದಿಗೆ ಮಾತ್ರ ಅವಕಾಶ ಕೊಡಲಾಗಿದೆ.

ಅನಗತ್ಯ ಸುತ್ತಾಟ, ಜನ ಸೇರುವಿಕೆ, ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮಗಳು, ಬಾರ್‌, ಪಬ್‌, ರೆಸ್ಟೋರೆಂಟ್‌, ಚಲನಚಿತ್ರಮಂದಿರ ಸೇರಿದಂತೆ ಅಗತ್ಯಸೇವೆಯಲ್ಲದ ಯಾವುದೇ ವಾಣಿಜ್ಯ ಚಟುವಟಿಕೆಗೂ ಅವಕಾಶವಿಲ್ಲ. ಜನರು ರಾತ್ರಿ 10 ರ ನಂತರ ಸುಖಾಸುಮ್ಮನೆ ಓಡಾಡಿದರೆ ಎಫ್‌ಐಆರ್ ಹಾಕಲಾಗುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷಾಚರಣೆಗೆ ಯಾವುದೇ ಅವಕಾಶವಿಲ್ಲ. ಸರ್ಕಾರಿ ಆದೇಶಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲಾಗುತ್ತಿದೆ. ಸರ್ಕಾರ ಆದೇಶದ ಪ್ರಕಾರ ಮುಂಗಡ ಬುಕ್ಕಿಂಗ್‌ ಇದ್ದವರು ಮಾತ್ರ ಹೋಟೆಲ್‌, ಪಬ್‌, ಕ್ಲಬ್‌ಗಳಿಗೆ ತೆರಳಬಹುದು' ಎಂದು ಕಮಿಷನರ್ ಪಂತ್ ಹೇಳಿದ್ದಾರೆ.