ಬೇಬಿ ಮೂನ್ ಎಂಜಾಯ್ ಮಾಡ್ತಿದ್ದಾರೆ ಮಿಲನ - ಕೃಷ್ಣ: ಫ್ಯಾನ್ಸ್‌ಗೆ ಮಗುವಿನದ್ದೆ ಚಿಂತೆ!

Published : May 07, 2024, 06:38 PM IST

ಮಗುವಿನ ನಿರೀಕ್ಷೆಯಲ್ಲಿರುವ ಸ್ಯಾಂಡಲ್ ವುಡ್ ಲವ್ ಬರ್ಡ್ಸ್ ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ಥೈಲ್ಯಾಂಡಲ್ಲಿ ಬೇಬಿ ಮೂನ್ ಎಂಜಾಯ್ ಮಾಡ್ತಿದ್ದಾರೆ.   

PREV
17
ಬೇಬಿ ಮೂನ್ ಎಂಜಾಯ್ ಮಾಡ್ತಿದ್ದಾರೆ ಮಿಲನ - ಕೃಷ್ಣ: ಫ್ಯಾನ್ಸ್‌ಗೆ ಮಗುವಿನದ್ದೆ ಚಿಂತೆ!

ಪೋಷಕರಾಗೋ ಖುಷಿಯಲ್ಲಿರೋ ಸ್ಯಾಂಡಲ್ ವುಡ್ ನ ಜನಪ್ರಿಯ ಜೋಡಿಗಳಾದ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಇದೀಗ ತಮ್ಮ ಬೇಬಿ ಮೂನ್ (baby moon) ಎಂಜಾಯ್ ಮಾಡಲು ವಿದೇಶಕ್ಕೆ ತೆರಳಿದ್ದಾರೆ. 
 

27

ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಮಿಲನಾ ನಾಗರಾಜ್ (Milana Nagraj) ತಮ್ಮ ಸೋಶಿಯಲ್ ಮೀಡೀಯಾದಲ್ಲಿ ಇಬ್ಬರು ಜೊತೆಯಾಗಿರುವ ಒಂದಷ್ಟು ಫೊಟೋಗಳನ್ನು ಶೇರ್ ಮಾಡಿ, ಎಲ್ಲಿದ್ದೀವಿ ಗೆಸ್ ಮಾಡಿ ಎಂದು ಕ್ಯಾಪ್ಶನ್ ಹಾಕಿದ್ದಾರೆ. 
 

37

ನಟ, ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಡಾರ್ಲಿಂಗ್ ಕೃಷ್ಣ (Darling Krishna) ಸಹ ಇಬ್ಬರು ಜೊತೆಯಾಗಿರುವ ಒಂದು ಫೋಟೋ ಹಾಕಿ, ಹೌದು, ನಾವು ಥೈಲ್ಯಾಂಡಲ್ಲಿ ಇದ್ದೀವಿ ಎಂದು ಬರೆದುಕೊಂಡಿದ್ದಾರೆ. 
 

47

ಸ್ಯಾಂಡಲ್ ವುಡ್ ನ ಲವ್ ಬರ್ಡ್ಸ್ ಮುದ್ದಾದ ಫೋಟೋ ನೋಡಿ, ಅಭಿಮಾನಿಗಳು ಖುಷಿಯಾಗಿದ್ದು, ಇಬ್ಬರಿಗೂ ಶುಭ ಹಾರೈಸಿದ್ದಾರೆ. ಮತ್ತೆ ಕೆಲವರು ಮಗುವಿನ ಬಗ್ಗೆ ಚಿಂತೆ ಮಾಡಿದ್ದಾರೆ. 
 

57

ಮಿಲನಾ ಪ್ರೆಗ್ನೆಂಟ್ ಅಲ್ವಾ? ಮಗು ಬಗ್ಗೆ ಹುಷಾರಮ್ಮ, ಹುಷಾರಾಗಿ ಟ್ರಾವೆಲ್ ಮಾಡಿ, ಪ್ರೆಗ್ನೆನ್ಸಿಯಲ್ಲಿ ಜಾಸ್ತಿ ಟ್ರಾವೆಲ್ ಮಾಡ್ಬೇಡಿ ಎಂದೆಲ್ಲಾ ಪ್ರೀತಿಯಿಂದ ಸಲಹೆ ನೀಡಿದ್ದಾರೆ ಅಭಿಮಾನಿಗಳು. 

67

ಇನ್ನು ಕೃಷ್ಣ ಶೇರ್ ಮಾಡಿರೋ ಫೋಟೋದಲ್ಲಿ ಮಿಲನಾ ಮುದ್ದಾದ ಕಂಡೂ ಕಾಣದಂತಿರುವ ಬೇಬಿ ಬಂಪ್ (baby bump)ಕಾಣಿಸುತ್ತಿದ್ದು, ಅದನ್ನೂ ನೋಡಿಯೂ ಅಭಿಮಾನಿಗಳು ಖುಷಿಯಾಗಿದ್ದಾರೆ. ಮುದ್ದಾದ ಬೇಬಿ ಬಂಪ್, ಕ್ಯೂಟ್, ಜೀವನದ ಈ ಹಂತವನ್ನು ಎಂಜಾಯ್ ಮಾಡಿ ಎಂದು ಸಹ ಕಾಮೆಂಟ್ ಮಾಡಿದ್ದಾರೆ. 

77

ಇದೇ ಮಾರ್ಚ್ ತಿಂಗಳಲ್ಲಿ ಮಿಲನ ಮತ್ತು ಕೃಷ್ಣ ತಾವು ಪ್ರೆಗ್ನೆಂಟ್ ಆಗಿರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವಿಶೇಷ ಫೋಟೋ ಶೇರ್ ಮಾಡುವ ಮೂಲಕ ತಿಳಿಸಿದ್ದರು. ಈ ಜೋಡಿ ಸೆಪ್ಟೆಂಬರ್ ತಿಂಗಳಲ್ಲಿ ಪೋಷಕರಾಗಲಿದ್ದಾರೆ. 

Read more Photos on
click me!

Recommended Stories