ಟೊಯೋಟಾ ಇನ್ನೋವಾ ಕ್ರಿಸ್ಟಾ GX+ ಕಾರು ಲಾಂಚ್, ಖರೀದಿಸುವ ಗ್ರಾಹಕರಿಕೆ ಆಫರ್!

By Suvarna News  |  First Published May 7, 2024, 6:54 PM IST

ಟೊಯೋಟಾ ಇನ್ನೋವಾ ಕ್ರಿಸ್ಟಾ ಕಾರು ಭಾರತದಲ್ಲಿ ಅತೀ ಹೆಚ್ಚು ಬೇಡಿಕೆಯ ಕಾರಾಗಿದೆ. ಇನ್ನೋವಾ ಪ್ರಯಾಣ ಕೂಡ ಹೆಚ್ಚು ಆರಾಮದಾಯಕ. ಇದೀಗ ಭಾರಿ ಬೇಡಿಕೆ ನಡುವೆ ಇನ್ನೋವಾ ಕ್ರಿಸ್ಟಾ GX+ ವೇರಿಯೆಂಟ್ ಲಾಂಚ್ ಮಾಡಿದೆ. ಇದರ ಜೊತೆಗೆ ಕೆಲ ಆಫರ್ ಕೂಡ ನೀಡಿದೆ. 
 


ಬೆಂಗಳೂರು(ಮೇ.07) ಟೊಯೊಟಾ ಕಿರ್ಲೋಸ್ಕರ್ ಮೋಟಾರ್  ಇದೀಗ ಇನ್ನೋವಾ ಕ್ರಿಸ್ಟಾ ವೇರಿಯೆಂಟ್‌ನಲ್ಲಿ ನೂತನ ಗ್ರೇಡ್  GX+  ಕಾರು ಬಿಡುಗಡೆ ಮಾಡಿದೆ.  ಗ್ರಾಹಕರ ಆದ್ಯತೆಗಳಿಗೆ ಅನುಗುಣವಾಗಿ ಈ ಕಾರು ನಿರ್ಮಾಣಗೊಂಡಿದೆ.  ಇನ್ನೋವಾ ಕ್ರಿಸ್ಟಾ ಲೈನ್ ಅಪ್ ಪುನರುಜ್ಜೀವನಗೊಳಿಸುತ್ತಾ ಹೊಸದಾಗಿ ಪರಿಚಯಿಸಲಾದ ಇನ್ನೋವಾ ಕ್ರಿಸ್ಟಾ GX+  ಗ್ರೇಡ್ 14 ಹೆಚ್ಚುವರಿ ವೈಶಿಷ್ಟ್ಯಗಳನ್ನು ಹೊಂದಿದೆ. 

ಎಕ್ಸ್ ಶೋರೂಂ ಬೆಲೆ ( ಎಕ್ಸ್ ಶೋ ರೂಂ)
ಇನ್ನೋವಾ ಕ್ರಿಸ್ಟಾ GX+ 7s:    Rs 21,39,000 ರೂಪಾಯಿ
ಇನ್ನೋವಾ ಕ್ರಿಸ್ಟಾ GX+ 8s:    Rs 21,44,000 ರೂಪಾಯಿ

Tap to resize

Latest Videos

undefined

ಕೇವಲ 11,000 ರೂಗೆ ಬುಕ್ ಮಾಡಿ ಟೊಯೋಟಾ ರುಮಿಯಾನ್ G-AT ಕಾರು!
  
ಹೊಸ ಇನ್ನೋವಾ ಕ್ರಿಸ್ಟಾ GX+ ಗ್ರೇಡ್ ಕಾರು ಖರೀದಿಸುವ ಗ್ರಾಹಕರಿಗೆ ವಿಸ್ತರಿತ ವಾರಂಟಿ ಮತ್ತು ಟೊಯೊಟಾ  ಜೆನ್ಯೂನ್ ಅಕ್ಸೆಸೊರಿಗಳಂತಹ ಮೌಲ್ಯವರ್ಧಿತ ಸೇವೆಗಳ ಲಭ್ಯವಾಗಲಿದೆ. 7 ವರ್ಷಗಳವರೆಗೆ ಹಣಕಾಸು ಯೋಜನೆಗಳು, ಕೈಗೆಟುಕುವಿಕೆಯೊಂದಿಗೆ ಕಡಿಮೆ ಇಎಂಐ, ಮೌಲ್ಯವರ್ಧಿತ ಸೇವೆಗಳು ಲಭ್ಯವಿದೆ. ಜೊತೆಗೆ ಪೂರ್ವ-ಅನುಮೋದಿತ ಧನಸಹಾಯ ಮತ್ತು ಮಹತ್ವಾಕಾಂಕ್ಷೆಯ ಖರೀದಿಯನ್ನು ಬೆಂಬಲಿಸಲು ಟೊಯೊಟಾ ಸ್ಮಾರ್ಟ್ ಫೈನಾನ್ಸ್ [ಬಲೂನ್ ಫೈನಾನ್ಸ್] ಲಭ್ಯವಿದೆ. ಇತರ ಮೌಲ್ಯ ಪ್ರಯೋಜನ ಸೇವೆಗಳಲ್ಲಿ ಟೊಯೊಟಾ ಹೊಸದಾಗಿ ಪರಿಚಯಿಸಿದ 5 ವರ್ಷಗಳ ಕಾಂಪ್ಲಿಮೆಂಟರಿ ರೋಡ್ ಸೈಡ್ ಅಸಿಸ್ಟೆನ್ಸ್, ವಾರಂಟಿ - 3 ವರ್ಷಗಳು / 1,00,000 ಕಿ.ಮೀ., ಇದನ್ನು 5 ವರ್ಷಗಳು / 2,20,000 ಕಿ.ಮೀ.ಗೆ ನಾಮಿನಲ್ ಕಾಸ್ಟ್ ನೊಂದಿಗೆ ವಿಸ್ತರಿಸಬಹುದು.

ಇನ್ನೋವಾ ಕ್ರಿಸ್ಟಾ GX+  ನ ಪ್ರಮುಖ ಹೈಲೈಟ್ ಗಳಲ್ಲಿ ರಿಯರ್ ಕ್ಯಾಮೆರಾ, ಆಟೋ-ಫೋಲ್ಡ್ ಮಿರರ್ಸ್, ಡಿವಿಆರ್ ನಂತಹ ಕ್ರಿಯಾತ್ಮಕ ವೈಶಿಷ್ಟ್ಯಗಳು ಮತ್ತು ಡೈಮಂಡ್-ಕಟ್ ಲಾಯ್ಸ್, ವುಡನ್ ಪ್ಯಾನೆಲ್, ಪ್ರೀಮಿಯಂ ಫ್ಯಾಬ್ರಿಕ್ ಸೀಟ್ಸ್ ನಂತಹ ಸೌಂದರ್ಯ ಸುಧಾರಣೆಗಳು ಇದರಲ್ಲಿ ಸೇರಿವೆ. 7- ಮತ್ತು 8-ಸೀಟರ್ ಆಯ್ಕೆಗಳಲ್ಲಿ ನೀಡಲಾಗುವ GX+  ಗ್ರೇಡ್ ಐದು ಅತ್ಯಾಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ. ಸೂಪರ್ ವೈಟ್, ಆಟಿಟ್ಯೂಡ್ ಬ್ಲ್ಯಾಕ್ ಮೈಕಾ, ಅವಂತ್-ಗಾರ್ಡೆ ಬ್ರೋನ್ಜ್ ಮೆಟಾಲಿಕ್, ಪ್ಲಾಟಿನಂ ವೈಟ್ ಪರ್ಲ್ ಮತ್ತು ಸಿಲ್ವರ್ ಮೆಟಾಲಿಕ್ ಬಣ್ಣಗಳಲ್ಲಿ ನೂತನ ವಾಹನ ಹೊರಬರಲಿದೆ.

ಈ ಕುರಿತು ಮಾತನಾಡಿದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ನ ಸೇಲ್ಸ್-ಸರ್ವೀಸ್-ಯೂಸ್ಡ್ ಕಾರ್ ಬಿಸಿನೆಸ್ ನ ಉಪಾಧ್ಯಕ್ಷರಾದ ಶ್ರೀ ಶಬರಿ ಮನೋಹರ್ ಅವರು, 2005 ರಲ್ಲಿ ಪ್ರಾರಂಭವಾದಾಗಿನಿಂದ ಇನ್ನೋವಾ ಬ್ರಾಂಡ್ ಉದ್ಯಮದ ಮಾನದಂಡಗಳನ್ನು ನಿಗದಿಪಡಿಸುವ ಮೂಲಕ ಸೆಗ್ ಮೆಂಟಿನ ನಾಯಕ ಎಂಬ ಅಚಲ ಖ್ಯಾತಿಯನ್ನು ಗಳಿಸಿದೆ. ಗುಣಮಟ್ಟ ಮತ್ತು ನಂಬಿಕೆಗೆ ಸಮಾನಾರ್ಥಕವಾಗಿರುವ ಇನ್ನೋವಾ ತಲೆಮಾರುಗಳ ಭಾರತೀಯರ ವೈವಿಧ್ಯಮಯ ಚಲನಶೀಲತೆ ಅಗತ್ಯಗಳನ್ನು ಪೂರೈಸಿದೆ ಮತ್ತು ಅದೇ ಮಹತ್ವಾಕಾಂಕ್ಷೆಯ ಮೌಲ್ಯವನ್ನು ಹೊಂದಿದೆ. ನಮ್ಮ ಗ್ರಾಹಕ-ಕೇಂದ್ರಿತ ವಿಧಾನಕ್ಕೆ ಅನುಗುಣವಾಗಿ ವಿಕಸನಗೊಳ್ಳುತ್ತಿರುವ ಗ್ರಾಹಕರ ಪ್ರವೃತ್ತಿಗಳ ಆಧಾರದ ಮೇಲೆ ಬ್ರಾಂಡ್ ಅನ್ನು ಪ್ರಸ್ತುತ ಪಡಿಸಲಾಗುತ್ತಿದೆ.

ಪೆಟ್ರೋಲ್ ಎಂಜಿನ್‌ನಲ್ಲಿ ಹೊಸ ಇನ್ನೋವಾ ಹೈಕ್ರಾಸ್, ಆಕರ್ಷಕ ಬೆಲೆಯಲ್ಲಿ ಕಾರು!

ಸುಧಾರಿತ ಸುರಕ್ಷತಾ ಕೊಡುಗೆಗಳು:
ಸುರಕ್ಷತೆಯು ಟೊಯೊಟಾಗೆ ಉನ್ನತ ಆದ್ಯತೆಯಾಗಿದೆ. ಇನ್ನೋವಾ ಕ್ರಿಸ್ಟಾ GX+ ಇದಕ್ಕೆ ಹೊರತಾಗಿಲ್ಲ. ರಿಯರ್ ಕ್ಯಾಮೆರಾ, ಎಸ್ ಆರ್ ಎಸ್  ಏರ್ ಬ್ಯಾಗ್ಸ್, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಹಿಲ್-ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್ ಸೇರಿದಂತೆ ಸಮಗ್ರ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರುವ ಈ ವಾಹನವು ಚಾಲಕ ಮತ್ತು ಪ್ರಯಾಣಿಕರಿಗೆ ಮನಶ್ಶಾಂತಿಯನ್ನು ನೀಡುತ್ತದೆ. ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ (ಎಬಿಎಸ್) ಮತ್ತು ಹೆಚ್ಚಿನ ಸಾಮರ್ಥ್ಯದ GOA ಬಾಡಿ ಸ್ಟ್ರಕ್ಚರ್ ಪ್ರತಿ ಪ್ರಯಾಣದಲ್ಲಿ ಸುರಕ್ಷತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.
 

click me!