Jun 30, 2022, 7:58 PM IST
ಬೆಳಗಾವಿ (ಜೂನ್ 30): ಮನುಷ್ಯರ ನಡುವೆ ಹಗ್ಗಜಗ್ಗಾಟ (tug of war) ನಡೆಯುವುದು ಕಾಮನ್. ಆದರೆ, ಬೆಳಗಾವಿ (Belagavi) ಜಿಲ್ಲೆಯ ಅಥಣಿ (Athani) ತಾಲೂಕಿನ ಚಮಕೇರಿ ಗ್ರಾಮದಲ್ಲಿ ಜಾತ್ರಾ ಮಹೋತ್ಸವದ ಪ್ರಯುಕ್ತ ಟ್ರ್ಯಾಕ್ಟರ್‌ಗಳ ಹಗ್ಗಜಗ್ಗಾಟ ನಡೆದವು.
ಟ್ರ್ಯಾಕ್ಟರ್‌ಗಳ (Tractor) ಹಗ್ಗಜಗ್ಗಾಟ ನೋಡಲು ಸಾಕಷ್ಟು ಜನ ಸೇರಿದ್ದರು. ಅಪಾಯವನ್ನು ಲೆಕ್ಕಿಸದೇ ಟ್ರಾಕ್ಟರ್ ಮೂಲಕ ಹಗ್ಗ ಜಗ್ಗಾಟ ಆಟದ ಆಯೋಜನೆ ಆಗಿತ್ತು. ಕಣ್ಣುಮುಂದೆ ಅಪಾಯ ಕಾಣಿಸುತ್ತಿದ್ದರೂ ಹುಚ್ಚರಂತೆ ಜನ ವರ್ತನೆ ಮಾಡುತ್ತಿದ್ದರು. ಸ್ವಲ್ಪ ಯಾಮಾರಿದ್ರು ಪ್ರಾಣಕ್ಕೆ ಕುತ್ತು ತಂದುಕೊಳ್ಳುವ ರೀತಿಯಲ್ಲಿ ಟ್ರಾಕ್ಟರ್ ಗಳನ್ನು ಬಳಸಲಾಗಿತ್ತು.
BELAGAVI CRIME NEWS: ಮನೆ ಮೇಲೆ ನೇತಾಡಿದ ವೃದ್ಧನ ಶವ: ಬೆಚ್ಚಿಬಿದ್ದ ಕುಂದಾನಗರಿ ಜನ!
ಗ್ರಾಮದ ಬೀರಲಿಂಗೇಶ್ವರ (Bera Lingeshwara Jatre) ಜಾತ್ರಾ ಮಹೋತ್ಸ ಹಿನ್ನಲೆ ಟ್ರಾಕ್ಟರ್ ಮೂಲಕ ಹಗ್ಗ ಜಗ್ಗಾಟದ ಆಟ ಆಯೋಜನೆ ಮಾಡಲಾಗಿತ್ತು. ಅಥಣಿ ಚಮಕೇರಿ (Chamakeri) ರಸ್ತೆ ಮೇಲೆ ಆಯೋಜಕರಿಂದ ಟ್ರ್ಯಾಕ್ಟರ್ಗಳ ಹಗ್ಗಜಗ್ಗಾಟ ನಡೆಸಲಾಗಿತ್ತು. ಅಪಾಯಕಾರಿ ಟ್ರ್ಯಾಕ್ಟರ್ ಹಗ್ಗ ಜಗ್ಗಾಟದಲ್ಲಿ ಯಾವುದೇ ಮುನ್ನೆಚ್ಚರಿಕೆ ಕ್ರಮ ವಹಿಸದೆ ಆಟ ಆಯೋಜನೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಇದಾಗಿದೆ.