Covid 19 : ಬರ್ತಡೇ ಪಾರ್ಟಿ ಎಡವಟ್ಟು, ಅಪಾರ್ಟ್‌ಮೆಂಟ್‌ನಲ್ಲಿ 10 ಕೋವಿಡ್ ಕೇಸ್ ಪತ್ತೆ

Nov 30, 2021, 4:48 PM IST

ಬೆಂಗಳೂರು (ನ. 30): ರಾಜ್ಯದಲ್ಲಿ ಒಮಿಕ್ರಾನ್ ಭೀತಿ (Omicron Threat) ಎದುರಾಗಿದೆ. 2 ನೇ ಅಲೆ ತೀವ್ರತೆ ಇಳಿಕೆಯಾಗಿದ್ದರಿಂದ ಜನರಲ್ಲಿ ಸ್ವಲ್ಪ ಮಟ್ಟಿಗೆ ನಿರ್ಲಕ್ಷ್ಯವಿತ್ತು. ಇದೀಗ ರಾಜಧಾನಿಯಲ್ಲಿ ಮತ್ತೆ ಸೋಂಕು ಹೆಚ್ಚಾಗುತ್ತಿರುವ ವರದಿಯಾಗುತ್ತಿದೆ. ಕೋರಮಂಗಲದ (Koramangal) ರಹೇಜ ಅಪಾರ್ಟ್‌ಮೆಂಟ್‌ವೊಂದರಲ್ಲಿ 10 ಕೊರೋನಾ ಕೇಸ್‌ಗಳು (Covid 19) ದಾಖಲಾಗಿದೆ. ಅಪಾರ್ಟ್‌ಮೆಂಟನ್ನು ಸೀಲ್‌ಡೌನ್ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಮಾಡಿದ ಬರ್ತಡೇ ಪಾರ್ಟಿಯಿಂದ ಸೋಂಕು ಹಬ್ಬಿದೆ ಎನ್ನಲಾಗಿದೆ. ಇನ್ನು ಹೊಸಪೇಟೆಗೆ (Hosapete) ಆಫ್ರಿಕಾದ ಇಬ್ಬರು ಆಗಮಿಸಿದ್ದಾರೆ. ಆರೋಗ್ಯ ಇಲಾಖೆ ಹೈ ಅಲರ್ಟ್ ಘೋಷಣೆ ಮಾಡಿದೆ. 

Omicron Variant Threat: ರಾಜ್ಯದಲ್ಲಿ ಶಾಲೆಗಳನ್ನು ಮುಚ್ಚುವ ಅಗತ್ಯವಿಲ್ಲ ಎಂದ ತಜ್ಞರ ಸಮಿತಿ