ಸಿಕ್ಕಾಪಟ್ಟೆ ಕಾಡುವ ಕೆಮ್ಮಿಗೆ ದಿವ್ಯ ಔಷಧ ಮನೆಯಲ್ಲೇ! ಡಾ.ಕಾರ್ತಿಕ್​ ವಿಡಿಯೋ ಮಾಹಿತಿ...

By Suvarna NewsFirst Published May 6, 2024, 1:35 PM IST
Highlights

ಎಲ್ಲಾ ಕಾಲಗಳಲ್ಲಿಯೂ ಕಾಡುವ ಕೆಮ್ಮಿನ ಔಷಧಕ್ಕೆ ಮನೆಯಲ್ಲಿಯೇ ಮಾಡುವ ಔಷಧಗಳ ಕುರಿತು ಡಾ.ಕಾರ್ತಿಕ್​ ಮಾಹಿತಿ ನೀಡಿದ್ದಾರೆ.
 

ಕೆಮ್ಮು ಎನ್ನುವುದು ಮಾಮೂಲಾಗಿ ಎಲ್ಲರಿಗೂ ಕಾಡುವ ಸಮಸ್ಯೆ. ಮಳೆ, ಚಳಿ, ಬಿಸಿಲು ಕಾಲ ಯಾವುದೇ ಇರಲಿ, ಸ್ವಲ್ಪವೇ ಹವಾಮಾನ ವೈಪರೀತ್ಯವಾದರೂ ಮೊದಲಿಗೆ ಕಾಡುವುದು ಗಂಟಲಿನ ಕಿಚ್​ಕಿಚ್​, ಅದರ ಹಿಂದೆ ಬರುವುದು ಗಂಟಲು ನೋವು, ಶೀತ ಜೊತೆಗೆ ಕೆಮ್ಮು. ಮೆಡಿಕಲ್​ ಷಾಪ್​ಗಳಲ್ಲಿ ಕೂಡಲೇ ಹೋಗಿ ಕೆಮ್ಮಿನ ಸಿರಪ್ ತಂದು ಕುಡಿಯುವುದು ಮಾಮೂಲು. ಆದರೆ ಈ ಸಿರಪ್​ಗಳಲ್ಲಿ ಹಲವು ಎಷ್ಟು ವಿಷಕಾರಿಯಾಗಿವೆ ಎನ್ನುವುದು ಇದಾಗಲೇ ಸಾಬೀತಾಗಿದೆ. ಅದರಲ್ಲಿಯೂ ಚಿಕ್ಕ ಮಕ್ಕಳಿಗೆ ಇಂಥ ಸಿರಪ್​ಗಳು ಕೊಟ್ಟರೆ ಭಾರಿ ಡೇಂಜರ್​. ಇಂಥ ಸಮಯದಲ್ಲಿ, ಮನೆಯಲ್ಲಿಯೇ ತಯಾರು ಮಾಡುವ ಕಷಾಯದ ಕುರಿತು ಮಾಹಿತಿ ನೀಡಿದ್ದಾರೆ ಡಾ. ಕಾರ್ತಿಕ್​

ಆರೋಗ್ಯಕರ ನೆಲ್ಲಿಕಾಯಿ ಜ್ಯೂಸ್​ ಮಾಡೋ ಸರಿ ವಿಧಾನ ಯಾವುದು? ಡಾ. ಪದ್ಮಿನಿ ಪ್ರಸಾದ್ ಮಾಡಿ ತೋರಿಸಿದ್ದಾರೆ ನೋಡಿ...

ಇವರು ತಯಾರಿರುವ ಕೆಮ್ಮಿನ ಕಷಾಯಕ್ಕೆ ಬೇಕಾಗಿರುವ ಸಾಮಗ್ರಿಗಳು: ​ 
ಕಾಲು ಚಮಚ ಅರಿಶಿಣ,
ಕಾಲು ಚಮಚ ಏಲಕ್ಕಿ ಪುಡಿ,
ಎಂಟು ಲವಂಗ,
ಕಾಲು ಚಮಚ ಕರಿ ಮೆಣಸು,
ಒಂದು ಚಮಚ ಕೆಂಪು ಕಲ್ಲು ಸಕ್ಕರೆ,
20 ಎಂ.ಎಲ್​ ಹಾಲು,

ಮಾಡುವ ವಿಧಾನ: ಕುಟ್ಟಾಣಿಯಲ್ಲಿ ಸ್ವಲ್ಪ ಸ್ವಲ್ಪ ಹಾಕಿ ಕುಟ್ಟಿ ಪುಡಿಮಾಡಿಕೊಳ್ಳಬೇಕು. ಕಫ, ಗಂಟಲಲ್ಲಿ ಕಿಚ್​ ಕಿಚ್​, ಕೆಮ್ಮು 

ಸ್ವಲ್ಪ ನೀರನ್ನು ಹಾಕಿ ಸ್ವಲ್ಪ ಕುದಿ ಬರುವವರೆ ಇಡಬೇಕು. ಕುದಿದ ಬಂದ ಮೇಲೆ ಅದಕ್ಕೆ ಸ್ವಲ್ಪ ಹಾಲು ಹಾಕಬೇಕು. ಅದಕ್ಕೆ ಕುಟ್ಟಿದ್ದ ಪುಡಿಗಳ ಮಿಶ್ರಣವನ್ನು ಹಾಕಬೇಕು. ಇದು ಉಕ್ಕಿಬಿಡುತ್ತದೆ. ಇದೇ ಕಾರಣಕ್ಕೆ ಸ್ಟಿರ್ ಮಾಡುತ್ತಾ ಇರಬೇಕು. ಹಾಲು ಸ್ವಲ್ಪ ಕುದಿ ಬರುತ್ತಿರುವಾಗಲೇ ಇದನ್ನು ಹಾಕಬೇಕು. ಇದಕ್ಕೆ ಸ್ವಲ್ಪ ಕಲ್ಲಸಕ್ಕರೆ ಹಾಕಬೇಕು. ಡಯಾಬೀಟಿಸ್​ ಇದ್ದರೆ ಹಾಗೆಯೇ ಕುಡಿಯಬಹುದು. ಇಷ್ಟು ಮಾಡಿದರೆ ಕಷಾಯ ರೆಡಿ. 

click me!