
ದುಬೈ: 9ನೇ ಆವೃತ್ತಿಯ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಸಾಂಪ್ರದಾಯಿಕ ಬದ್ಧವೈರಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಅಕ್ಟೋಬರ್ 6ರಂದು ಪರಸ್ಪರ ಸೆಣಸಾಡಲಿವೆ. ಬಾಂಗ್ಲಾದಲ್ಲಿ ಅಕ್ಟೋಬರ್ 3ರಿಂದ ಅಕ್ಟೋಬರ್ 20ರ ವರೆಗೆ ನಡೆಯಲಿರುವ ಟೂರ್ನಿಯಲ್ಲಿ 10 ತಂಡಗಳು ಪಾಲ್ಗೊಳ್ಳಲಿವೆ. ಭಾನುವಾರ ಐಸಿಸಿ ಟೂರ್ನಿಯ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, 2020ರ ರನ್ನರ್-ಅಪ್ ಭಾರತ ತಂಡ ‘ಎ’ ಗುಂಪಿನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ.
ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಕೂಡಾ ಇದೇ ಗುಂಪಿನಲ್ಲಿವೆ. ಭಾರತ ಅ.4ರಂದು ನ್ಯೂಜಿಲೆಂಡ್ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದ್ದು, ಅ.9ಕ್ಕೆ ಕ್ವಾಲಿಫೈಯರ್ 1 ತಂಡ ಎದುರಾಗಲಿದೆ. 6 ಬಾರಿ ಚಾಂಪಿಯನ್ ಆಸೀಸ್ ವಿರುದ್ಧ ಅ.13ಕ್ಕೆ ಆಡಲಿದೆ.
IPL 2024 ಸನ್‌ರೈಸರ್ಸ್‌ಗೆ ಮುಂಬೈ ಟೆಸ್ಟ್: ಗೆದ್ದರೆ ಆರೆಂಜ್ ಆರ್ಮಿ ಪ್ಲೇ-ಆಫ್‌ಗೆ ಹತ್ತಿರ
ಆತಿಥೇಯ ಬಾಂಗ್ಲಾದೇಶ, ದ.ಆಫ್ರಿಕಾ. ಇಂಗ್ಲೆಂಡ್, ವೆಸ್ಟ್‌ಇಂಡೀಸ್ ಹಾಗೂ ಕ್ವಾಲಿಫೈಯರ್ 2 ತಂಡ ‘ಬಿ’ ಗುಂಪಿನಲ್ಲಿವೆ. ಪ್ರತಿ ಗುಂಪಿನ ಅಗ್ರ-2 ತಂಡಗಳು ನಾಕೌಟ್‌ಗೇರಲಿವೆ. ಅ.20ಕ್ಕೆ ಫೈನಲ್ ಪಂದ್ಯ ನಡೆಯಲಿದೆ.
ಬೌಲರ್‌ಗಳ ಕೌಶಲ್ಯಗಳಿಗೆ ಬೆಲೆ ಸಿಗುತ್ತಿಲ್ಲ: ಆರ್.ಅಶ್ವಿನ್ ಬೇಸರ
ನವದೆಹಲಿ: ಐಪಿಎಲ್‌ನಲ್ಲಿ ಬೃಹತ್ ಮೊತ್ತಗಳು ದಾಖಲಾಗುತ್ತಿರುವುದಕ್ಕೆ ರಾಜಸ್ಥಾನ ತಂಡದ ಸ್ಪಿನ್ನರ್ ಆರ್.ಅಶ್ವಿನ್ ಆತಂಕ ವ್ಯಕ್ತಪಡಿಸಿದ್ದು, ಸಣ್ಣ ಬೌಂಡರಿಗಳಿಂದ ಬೌಲರ್‌ಗಳ ಕೌಶಲ್ಯಗಳಿಗೆ ಬೆಲೆ ಸಿಗುತ್ತಿಲ್ಲ ಎಂದಿದ್ದಾರೆ. ಈ ಬಗ್ಗೆ ತಂಡದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅಶ್ವಿನ್, ‘ತುಂಬಾ ಹಿಂದೆ ನಿರ್ಮಿಸಲಾದ ಕ್ರೀಡಾಂಗಣಗಳು ಈಗಿನ ಕಾಲಕ್ಕೆ ಸೂಕ್ತವಲ್ಲ. ಆಗ ಬಳಸುತ್ತಿದ್ದ ಬ್ಯಾಟ್‌ಗಳನ್ನು ಗಲ್ಲಿ ಕ್ರಿಕೆಟ್‌ಗೆ ಬಳಸಲಾಗುತ್ತಿತ್ತು. ಅಲ್ಲದೆ ಪ್ರಾಯೋಜಕರ ಎಲ್‌ಇಡಿ ಬೋರ್ಡ್‌ಗಳನ್ನು ಬಳಸಿದ್ದರಿಂದ 10 ಗಜಗಳಷ್ಟು ಬೌಂಡರಿಗಳು ಸಣ್ಣದಾಗಿವೆ’ ಎಂದಿದ್ದಾರೆ. ಅಲ್ಲದೆ, ಐಪಿಎಲ್‌ನಲ್ಲಿ ಈ ರೀತಿ ಬೃಹತ್ ಮೊತ್ತಗಳು ದಾಖಲಾವುಗುದು ಸಾಮಾನ್ಯವಾದರೆ, ಭವಿಷ್ಯದಲ್ಲಿ ಪಂದ್ಯಗಳು ಏಕಪಕ್ಷೀಯವಾಗಲಿದೆ ಎಂದಿದ್ದಾರೆ.
IPL 2024 ಕೆಕೆಆರ್ ಆರ್ಭಟಕ್ಕೆ ಲಖನೌ ಸೂಪರ್ ಜೈಂಟ್ಸ್ ತಬ್ಬಿಬ್ಬು..!
ಗಾಯಾಳು ವೇಗಿ ಪತಿರನ ತವರಿಗೆ: ಚೆನ್ನೈಗೆ ಸಂಕಷ್ಟ
ಚೆನ್ನೈ: ಈ ಬಾರಿ ಐಪಿಎಲ್‌ನಲ್ಲಿ ಬೌಲರ್‌ಗಳ ಕೊರತೆ ಎದುರಿಸುತ್ತಿರುವ ಚೆನ್ನೈಗೆ ಮತ್ತಷ್ಟು ಸಂಕಷ್ಟ ಎದುರಾಗಿದ್ದು, ತಂಡದ ಪ್ರಮುಖ ವೇಗಿ ಮಥೀಶ ಪತಿರನ ಮಂಡಿರಜ್ಜು ಗಾಯಕ್ಕೆ ತುತ್ತಾಗಿ ಶ್ರೀಲಂಕಾಕ್ಕೆ ಹಿಂದಿರುಗಿದ್ದಾರೆ. ಪತಿರನ 6 ಪಂದ್ಯಗಳಲ್ಲಿ 13 ವಿಕೆಟ್ ಪಡೆದಿದ್ದರು.
ಈಗಾಗಲೇ ಆಲ್ರೌಂಡರ್ ದೀಪಕ್ ಚಹರ್ ಗಾಯಗೊಂಡಿದ್ದು, ಚೆನ್ನೈನ ಮುಂದಿನ ಪಂದ್ಯಗಳಲ್ಲಿ ಆಡುವ ಸಾಧ್ಯತೆಯಿಲ್ಲ. 14 ವಿಕೆಟ್ ಪಡೆದಿದ್ದ ವೇಗಿ ಮುಸ್ತಾಫಿಜುರ್ ರಹ್ಮಾನ್ ಕೂಡಾ ರಾಷ್ಟ್ರೀಯ ತಂಡದಲ್ಲಿ ಆಡಲು ಬಾಂಗ್ಲಾದೇಶಕ್ಕೆ ತೆರಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.